Saturday, June 6, 2026
Homeಕರಾವಳಿತುಳುವಿಗೆ ಡಬ್ ಆಗುತ್ತಾ ಕಾಂತಾರ ಸಿನಿಮಾ?

ತುಳುವಿಗೆ ಡಬ್ ಆಗುತ್ತಾ ಕಾಂತಾರ ಸಿನಿಮಾ?

- Advertisement -
- Advertisement -

ಮಂಗಳೂರು : ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ಭಾಷೆಯ ಹಂಗಿಲ್ಲದೇ ಎಲ್ಲೆಡೆ ತನ್ನ ಖದರ್ ತೋರಿಸುತ್ತಿದೆ. ಪಂಚ ಭಾಷೆಯ ಚಿತ್ರವಾಗಿ ಮೂಡಿ ಬಂದಿರುವ ಕಾಂತಾರ ಸಿನಿಮಾ ಇದೀಗ ತುಳು ಭಾಷೆಗೆ ಡಬ್ ಆಗುತ್ತೆ ಅನ್ನೋ ಸುದ್ದಿ ಜೋರಾಗಿ ಕೇಳಿ ಬರುತ್ತಿದೆ.

ಕರಾವಳಿಯ ಕಥೆಯ ಮೂಲವಾಗಿರುವ ರಿಷಭ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಈಗಾಗಲೇ ಪಂಚ ಭಾಷಾ ಚಿತ್ರವಾಗಿ ಭಾರಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ದೈವಾರಾಧನೆ ಕೆಲ ರೋಚಕ ಸನ್ನಿವೇಶಗಳಲ್ಲಿ ತುಳುವಿನ ಕೆಲ ಶಬ್ದಗಳ ಸಂಭಾಷಣೆಗಳನ್ನು ಬಳಸಿಕೊಳ್ಳಲಾಗಿದ್ದು, ಕರಾವಳಿಯ ಹೆಚ್ಚಿನ ಚಿತ್ರ ಪ್ರೇಮಿಗಳು ಈ ಚಿತ್ರ ಸಂಪೂರ್ಣವಾಗಿ ತುಳುವಿನಲ್ಲಿ ಬಿಡುಗಡೆಯಾದರೆ ಇನ್ನು ಚೆನ್ನಾಗಿರುತ್ತೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಚಿತ್ರದಲ್ಲಿ ನಟಿಸಿದ ಹಲವು ಮಂದಿ ಕಲಾವಿದರು ತುಳು ಬಲ್ಲವರಾಗಿದ್ದು, ಅವರವರ ಪಾತ್ರಗಳಿಗೆ ಡಬ್ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ ಸಿನಿಮಾ ತಂಡದಿಂದ ಈ ಬಗ್ಗೆ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ.

- Advertisement -

Latest News

error: Content is protected !!