Saturday, June 6, 2026
Homeಕರಾವಳಿಕಲ್ಲಡ್ಕ: ಬಂಟರ ಸಂಘದ ವತಿಯಿಂದ ಬಡ ಕುಟುಂಬಕ್ಕೆ ಮನೆ ನಿರ್ಮಾಣದ ಕಾರ್ಯ ಆರಂಭ

ಕಲ್ಲಡ್ಕ: ಬಂಟರ ಸಂಘದ ವತಿಯಿಂದ ಬಡ ಕುಟುಂಬಕ್ಕೆ ಮನೆ ನಿರ್ಮಾಣದ ಕಾರ್ಯ ಆರಂಭ

- Advertisement -
- Advertisement -

ಕಲ್ಲಡ್ಕ: ಕಲ್ಲಡ್ಕ ವಲಯ ಬಂಟರ ಸಂಘದ ವತಿಯಿಂದ ವೀರಕಂಭ ಗ್ರಾಮದ ಬಡ ಕುಟುಂಬದ ಪಾತ್ರಜಾಲು ಗಣೇಶ್ ಶೆಟ್ಟಿ ರಿಗೆ ಒಂದು ಮನೆ ನಿರ್ಮಾಣ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ವಲಯ ಬಂಟರ ಸಂಘದ ಅಧ್ಯಕ್ಷರಾದ ಪದ್ಮನಾಭ ರೈ ಇವರ ಅದ್ಯಕ್ಷತೆಯಲ್ಲಿ ಜರಗಿತು. ಈ ಕಾರ್ಯಕ್ರಮದಲ್ಲಿ ಕಲ್ಲಡ್ಕ ವಲಯ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಟ್ಟಿ ಗೋಳ್ತಮಜಲು, ವೀರಕಂಭ ಗ್ರಾಮ ಸಮಿತಿಯ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಬೆಂಜಾತ್ತಿಮಾರು, ಯುವ ಬಂಟರ ಸಂಘ ಕಲ್ಲಡ್ಕ ವಲಯದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಣಾಜೆ ಹಾಗೂ ಇನ್ನಿತರ ಪಧಾಧಿಕಾರಿಗಳು ಉಪಸ್ಥಿತರಿದ್ದರು.

ಸುಮಾರು 4 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಮನೆಗೆ ಕಲ್ಲಡ್ಕ ವಲಯ ಬಂಟರ ಸಂಘದ ಎಲ್ಲ ಗ್ರಾಮ ಸಮಿತಿಯ ಸದಸ್ಯರು ಹಾಗು ಗ್ರಾಮಸ್ಥರು ಸಹಾಯ ನೀಡಲಿದ್ದಾರೆ.

- Advertisement -

Latest News

error: Content is protected !!