Saturday, October 17, 2026
Homeಕರಾವಳಿಕಡಬ : ಭಾರೀ ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಹೆಂಚುಗಳು

ಕಡಬ : ಭಾರೀ ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಹೆಂಚುಗಳು

- Advertisement -
- Advertisement -

ಕಡಬ : ಭಾರೀ ಗಾಳಿ ಮಳೆಗೆ ಶಾಲೆಯ ಹೆಂಚುಗಳು ಹಾರಿ ಹೋದ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿಯ  ಬಲ್ಯ ಹಿ.ಪ್ರಾ.ಶಾಲೆಯಲ್ಲಿ ನಡೆದಿದೆ.ಭಾರಿ ಗಾಳಿ ಪರಿಣಾಮ ಶಾಲಾ ಕಟ್ಟಡದ ಹೆಂಚುಗಳು ಗಾಳಿಗೆ ಹಾರಿ ಹೋಗಿದ್ದು, ತರಗತಿಯೊಳಗೆ  ನೀರು ನಿಂತಿದೆ.

ಛಾವಣಿಯನ್ನು ದುರಸ್ತಿ ಮಾಡದಿದ್ದರೆ ತರಗತಿ ನಡೆಸಲು ಸಾಧ್ಯವಿಲ್ಲ. ಭಾನುವಾರ ರಜಾ ದಿನವಾದ್ದರಿಂದ ಭಾರೀ ಅನಾಹುತ ತಪ್ಪಿದೆ. ಘಟನೆಯ ಮಾಹಿತಿ ತಿಳಿದು ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ ಕೆ, ಪಂಚಾಯತ್  ಸದಸ್ಯೆ ಮೀನಾಕ್ಷಿ ನೆಲ್ಲ, ಎಸ್ ಡಿ ಎಂ ಸಿ ಸದಸ್ಯ ಗಣೇಶ್ ಭಟ್ ದೇವರಡ್ಕ, ಮಾಜಿ ಅಧ್ಯಕ್ಷ ಪಿ.ಟಿ.ಜೋಸೆಫ್, ಉಮಾಮಹೇಶ್ವರಿ ದೇವಸ್ಥಾನದ ಕಾರ್ಯದರ್ಶಿ ನಾರಾಯಣ ಎನ್ ಕೊಲ್ಲಿಮಾರು ಬಲ್ಯ ಮತ್ತಿತರರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!