ಕಡಬ; ಯುವತಿಯೊಬ್ಬಳ ಜೊತೆ ತನ್ನ ಫೋಟೋ ತೆಗೆದು ಹಣಕ್ಕಾಗಿ ಬ್ಯಾಕ್ ಮೇಲ್ ಮಾಡಿದ್ದಾರೆ ಎಂದು ಕಡಬದಲ್ಲಿ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಡಬ ತಾಲೂಕಿನ ಹೊಸ್ಮಠದ ಇಲಿಯಾಸ್ ದೂರು ನೀಡಿದವರು. ಇಲಿಯಾಸ್ ಹೊಸ್ಮಠದಲ್ಲಿ ಕೃಷಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರ ಕಾರಿಗೆ ಫೈಝಲ್ ಎಂಬಾತ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ.
ಜೂ.14ರಂದು ಇಲಿಯಾಸ್ ಮಂಗಳೂರಿನಿಂದ ಕಾರಿನಲ್ಲಿ ತಮ್ಮ ಮನೆಯಾದ ಬಲ್ಯ ಹೊಸ್ಮಠಕ್ಕೆ ಬಂದಿದ್ದಾರೆ. ಹಾಗೇ ಬಂದವರು ಬಟ್ಟೆ ತೆಗೆದು ತೋಟಕ್ಕೆ ಹೋಗಲು ರೆಡಿ ಆಗುತ್ತಿದ್ದರು. ಇದೇ ವೇಳೆ ಇಲಿಯಾಸ್ ಅವರ ಮನೆಗೆ ಸ್ಕೂಟರ್‌ನಲ್ಲಿ ಒಂದು ಮುಸ್ಲೀಂ ಯುವತಿ ಮತ್ತು ಯುವಕ ಬಂದಿದ್ದಾರೆ. ಇದೇ ವೇಳೆ ಇಲಿಯಾಸ್ ಅವರ ಕಾರು ಚಾಲಕ ಆರೋಪಿ ಫೈಝಲ್ ಮತ್ತು ಯುವಕ ಮನೆಗೆ ಬಂದಿದ್ದ ಮುಸ್ಲಿಂ ಯುವತಿಯೊಂದಿಗೆ ಇಲಿಯಾಸ್ ಅವರನ್ನು ಬಲವಂತವಾಗಿ ಕುಳ್ಳಿರಿಸಿದ್ದಾರೆ. ಬಳಿಕ ಯುವತಿಯು ಬುರ್ಖಾ ತೆಗೆದು ಟೀ ಶರ್ಟ್ ಹಾಕಿ ಪಕ್ಕ ಕುಳಿತುಕೊಂಡಾಗ ಕಾರು ಚಾಲಕ ಫೈಝಲ್ ಹಾಗೂ ಯುವಕ ಇಲಿಯಾಸ್ ಮತ್ತು ಯುವತಿಯ ಪೋಟೋ ತೆಗೆದು ನಂತರ 5 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಇಲಿಯಾಸ್ ಆರೋಪಿಸಿದ್ದಾರೆ.
ಇನ್ನು ಹಣ ಕೊಡದಿದ್ದರೆ ಪೋಟೋವನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದಾರೆ. ಹಣವನ್ನು ಕೊಡುವುದಿಲ್ಲ ಎಂದು ಹೇಳಿದಾಗ ಆರೋಪಿಗಳು ಕೊಲೆ ಮಾಡುವುದಾಗಿ ಬೆದರಿಸಿದ್ದು ನಂತರ ಇಲಿಯಾಸ್ ಹಣ ಕೊಡದೇ ಇದ್ದಾಗ ಆರೋಪಿ ಫೈಝಲ್ ಇಲಿಯಾಸ್ ರನ್ನು ಎಳೆದಾಡಿ ಬಲವಂತವಾಗಿ ಕಾರಿನ ಕೀಯನ್ನು ಎಳೆದುಕೊಂಡು ಕಾರನ್ನು ತೆಗೆದುಕೊಂಡು ಹೋಗಿದ್ದಾನೆ. ನಂತರ ಆರೋಪಿ ಅದೇ ದಿನ ರಾತ್ರಿ ಇಲಿಯಾಸ್ ಅವರಿಗೆ ಕರೆ ಮಾಡಿ 5 ಲಕ್ಷ ಹಣ ಕೊಡದಿದ್ದರೆ ನಿಮ್ಮ ಕಾರನ್ನು ಅಪಘಾತಪಡಿಸುತ್ತೇನೆ ಹಾಗೂ ಕಾರನ್ನು ಮಾರಾಟ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಕಡಬ ಪೊಲೀಸ್ ಠಾಣೆಯಲ್ಲಿ ಇಲಿಯಾಸ್ ದೂರು ದಾಖಲಿಸಿದ್ದಾರೆ.