Thursday, May 2, 2024
Homeಕರಾವಳಿಕಡಬದ ಯುವಕ ಮಸ್ಕತ್ ನಲ್ಲಿ ನೇಣಿಗೆ ಶರಣು

ಕಡಬದ ಯುವಕ ಮಸ್ಕತ್ ನಲ್ಲಿ ನೇಣಿಗೆ ಶರಣು

spot_img
- Advertisement -
- Advertisement -

ಕಡಬ ಯುವಕನೋರ್ವ ಮಸ್ಕತ್ ನಲ್ಲಿ ನೇಣಿಗೆ ಶರಣಾದ ಘಟನೆ ನಡೆದಿದೆ. ಕೊಯಿಲ ಗ್ರಾಮದ ಸುಣ್ಣಾಡಿ ನಿವಾಸಿ ದಿ|ಮೋನಪ್ಪ ಪೂಜಾರಿಯವರ ಪುತ್ರ ಸಂದೇಶ್ (32) ಮೃತ ದುರ್ದೈವಿ. ಓಮನ್ ದೇಶದ ಮಸ್ಕತ್‌ನಲ್ಲಿ ನೀರಿನ ಕಂಪನಿಯೊಂದರಲ್ಲಿ ಲೈನ್ ಸೇಲಿಂಗ್ ಕೆಲಸ ಮಾಡುತ್ತಿದ್ದ ಮಾಡುತ್ತಿದ್ದು ಸಂದೇಶ್ ಎಂಟು ತಿಂಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದರು. ಇವರ ಸಹೋದರ ಸಂತೋಷ್ ಕೂಡಾ ಮಸ್ಕತ್‌ನಲ್ಲೇ ಉದ್ಯೋಗದಲ್ಲಿದ್ದು ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು.ಅವರ ಸಂಬಂಧಿ ಚರಣ್ ಇನ್ನೊಂದು ರೂಂನಲ್ಲಿ ವಾಸವಾಗಿದ್ದರು.

 ಬೇಗ ಕೆಲಸ ಮುಗಿಸಿ ರೂಮಿಗೆ ಬಂದ ಸಂದೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ವಲ್ಪ  ಹೊತ್ತಿನ ಬಳಿಕ ಚರಣ್ ಅವರು ಸಂದೇಶ್ ಇರುವ ಕೊಠಡಿಗೆ ಬಂದು ನೋಡಿದಾಗ ಕೊಠಡಿ ಬಾಗಿಲು ಬಂದ್ ಆಗಿತ್ತು. ಕರೆದಾಗ ಯಾವುದೇ ರೆಸ್ಪಾನ್ಸ್ ಬಾರದೇ ಇದ್ದಾಗ ಗಾಬರಿಯಿಂದ ಸಂದೇಶ್ ಸಹೋದರ ಸಂತೋಷ್‌ಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ.ಕೊಠಡಿಯ ಒಂದು ಕೀ ಸಂತೋಷ್ ಬಳಿ ಇದ್ದುದರಿಂದ ಬಾಗಿಲು ತೆರೆದು ನೋಡುವಾಗ ಅವರು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ.


ಸಂದೇಶ ಸಹೋದರ ಸಂತೋಷ್ ಏಳು ವರ್ಷಗಳ ಹಿಂದೆ ಮಸ್ಕತ್‌ಗೆ ಉದ್ಯೋಗಕ್ಕೆ ತೆರಳಿದ್ದರು. ಮೃತ ಸಂದೇಶ ಕಳೆದ ಕೆಲವು ವರ್ಷಗಳಿಂದ ಚೆನ್ನೈನ ಹೋಟೇಲ್‌ನಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. 8 ತಿಂಗಳ ಹಿಂದೆಯಷ್ಟೇ ಮಸ್ಕತ್ ಗೆ ತೆರಳಿದ್ದರು. ಆರಂಭದಲ್ಲಿ ವಿಸಿಟಿಂಗ್ ವೀಸಾದಲ್ಲಿ ಮಸ್ಕತ್‌ಗೆ ತೆರಳಿದ್ದ ಸಂದೇಶ್ ಬಳಿಕ ಅಲ್ಲಿನ ಕೆಲಸದ ವೀಸಾ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದರು. ಅಣ್ಣ Sorry ಎಂದು ಕೇವಲ ಒಂದು ಲೈನ್ ಡೆತ್ ನೋಟ್ ಬರೆದಿಟ್ಟು ಸಂದೇಶ್  ಆತ್ಮಹತ್ಯೆಗೆ ಶರಣಾಗಿದ್ದಾರೆ.ಆತ್ಮಹತ್ಯೆಗ ನಿಖರ ಕಾರಣ ತಿಳಿದು ಬಂದಿಲ್ಲ. ನಾಳೆ ಅವರ ಮೃತದೇಹ ಹುಟ್ಟೂರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!