Thursday, June 4, 2026
Homeಕರಾವಳಿಕಡಬ; ಬೆಡ್ ಶೀಟ್ ಮಾರುವ ನೆಪದಲ್ಲಿ ಬಂದು ಅತ್ಯಾಚಾರ ಯತ್ನ ಆರೋಪ: ಆರೋಪಿಗಳ ವಿರುದ್ಧ ಸೂಕ್ತ...

ಕಡಬ; ಬೆಡ್ ಶೀಟ್ ಮಾರುವ ನೆಪದಲ್ಲಿ ಬಂದು ಅತ್ಯಾಚಾರ ಯತ್ನ ಆರೋಪ: ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸಚಿವ ಅಂಗಾರ ಆಗ್ರಹ

- Advertisement -
- Advertisement -

ಕಡಬ: ಕಾಣಿಯೂರಿನ ದೋಳ್ಪಾಡಿ ಗ್ರಾಮ ಎಂಬಲ್ಲಿ  ಬೆಡ್‌ಶೀಟ್‌ ಮಾರಾಟದ ನೆಪದಲ್ಲಿ ಬಂದು ಅನ್ಯಕೋಮಿನ ಯುವಕರಿಬ್ಬರು ದಲಿತ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ಹೇಳಿದ್ದಾರೆ .

ಕೆಲವು ಕಾಂಗ್ರೆಸ್‌ ನಾಯಕರು ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳ ಪರವಾಗಿ ವಾದಿಸುತ್ತಿರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ. ದಲಿತ ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡಲಾಗಿದೆ. ಕೆಲವು ಕಾಂಗ್ರೆಸ್‌ ನಾಯಕರು ಪ್ರಕರಣವನ್ನು ತಿರುಚಿ ಆರೋಪಿಗಳನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ ನಾಯಕರ ದಲಿತ ವಿರೋಧಿ ನೀತಿ ಇದರಿಂದ ಬಹಿರಂಗವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

- Advertisement -

Latest News

error: Content is protected !!