Wednesday, June 24, 2026
Homeಕರಾವಳಿಮಂಗಳೂರುಕಡಬ: ಸ್ನಾನಕ್ಕೆಂದು ನದಿಗಿಳಿದ ಯುವಕ ನೀರುಪಾಲು

ಕಡಬ: ಸ್ನಾನಕ್ಕೆಂದು ನದಿಗಿಳಿದ ಯುವಕ ನೀರುಪಾಲು

- Advertisement -
- Advertisement -

ಕಡಬ: ಸ್ನಾನಕ್ಕೆಂದು ನದಿಗಿಳಿದ ಯುವಕ ನೀರುಪಾಲಾಗಿರುವ ಘಟನೆ ಸೋಮವಾರ ಸಂಜೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೊರಿಯರ್ ಎಂಬಲ್ಲಿ ನಡೆದಿದೆ.ರಕ್ಷಿತ್ (26) ನೀರುಪಾಲಾದ ಯುವಕ.

ಮೂಲತಃ ಮರ್ದಾಳದಲ್ಲಿ ಕುಟುಂಬದವರ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದ ರಕ್ಷಿತ್  ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದರು .  ಸೋಮವಾರ ಸಂಜೆ 72 ಸಿ.ಆರ್.ಸಿ ಕಾಲೋನಿಯಲ್ಲಿರುವ ತನ್ನ ಸ್ನೇಹಿತರ ಗುಂಪಿನೊಂದಿಗೆ ಐತ್ತೂರು ಗ್ರಾಮದ ಅರಬ್ಬಿ ತೋಡು ಎಂಬಲ್ಲಿಗೆ ಸ್ನಾನ ಮಾಡಲು ತೆರಳಿದ್ದರು. ಈ ವೇಳೆ ಈಜಲು ತಿಳಿದಿದ್ದರೂ ಸಹ, ನೀರಿನ ಸೆಳೆತ ಅಥವಾ ಆಳದ ಅರಿವಾಗದೆ ರಕ್ಷಿತ್ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.ಯುವಕ ನಾಪತ್ತೆಯಾದ ತಕ್ಷಣ ಸ್ನೇಹಿತರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಕಡಬ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾದ ಯುವಕನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಕತ್ತಲಾದ ಕಾರಣ ಕಾರ್ಯಾಚರಣೆಗೆ ಅಲ್ಪ ಹಿನ್ನಡೆಯಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!