Friday, June 5, 2026
Homeಕರಾವಳಿಕಡಬ: ಮೇಯಲು ಬಿಟ್ಟ ಆಡನ್ನು ನುಂಗಲು ಯತ್ನಿಸಿದ ಭಾರೀ ಗಾತ್ರದ ಹೆಬ್ಬಾವು

ಕಡಬ: ಮೇಯಲು ಬಿಟ್ಟ ಆಡನ್ನು ನುಂಗಲು ಯತ್ನಿಸಿದ ಭಾರೀ ಗಾತ್ರದ ಹೆಬ್ಬಾವು

- Advertisement -
- Advertisement -

ಕಡಬ: ಮೇಯಲು ಬಿಟ್ಟ ಆಡನ್ನು ಭಾರೀ ಗಾತ್ರದ ಹೆಬ್ಬಾವು ನುಂಗಲು ಯತ್ನಿಸಿದ ಘಟನೆ ಕಡಬದ ಮರ್ದಾಳ ಸಮೀಪದ ಐತ್ತೂರು ಗ್ರಾಮದ ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ  ನಡೆದಿದೆ.

45 ಕೆಜಿ ತೂಕದ ಗಂಡು ಆಡನ್ನು ನುಂಗಲು ಹೆಬ್ಬಾವು ಒಂದು ತಾಸು ಸೆಣಸಿ ವಿಫಲ ಯತ್ನ ನಡೆಸಿದೆ.ಸ್ಥಳೀಯರಾದ ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಸುಮಾರು ಹೆಬ್ಬಾವಿನ ಉರುಳಿಗೆ ಸಿಕ್ಕಿ ಉಸಿರುಗಟ್ಟಿ ಪ್ರಾಣ ಬಿಟ್ಟಿದೆ.

ಆಡಿನ ತಲೆಯ ಭಾಗವನ್ನು ನುಂಗಿದರೂ ಉಳಿದ ಭಾಗವನ್ನು ನುಂಗಲು ಸಾಧ್ಯವಾಗದೆ  ಸತ್ತ ಆಡನ್ನು ಸ್ಥಳದಲ್ಲೇ ಬಿಟ್ಟು ಪೊದೆಯೊಳಗೆ ಅವಿತುಕೊಂಡಿದೆ.ಸ್ಥಳೀಯರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!