Thursday, June 4, 2026
Homeಕರಾವಳಿಸುಳ್ಯದಲ್ಲಿ ಜ್ಯುವೆಲ್ಲರಿ ಶಾಪ್ ಗೆ ಕನ್ನ: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ

ಸುಳ್ಯದಲ್ಲಿ ಜ್ಯುವೆಲ್ಲರಿ ಶಾಪ್ ಗೆ ಕನ್ನ: ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ

- Advertisement -
- Advertisement -

ಸುಳ್ಯ:  ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿರುವ ಮೋಹನ್ ಜ್ಯುವೆಲ್ಲರಿ ಮಾರ್ಟ್ ಗೆ ನಿನ್ನೆ ರಾತ್ರಿ ಕಳ್ಳರು ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ.

ಚಿನ್ನದ ಅಂಗಡಿಯ ಬೀಗ ಮುರಿದಿರುವ ವಿಷಯ ತಿಳಿದ ಸ್ಥಳೀಯರು, ಅಂಗಡಿ ಮಾಲೀಕರು ಹಾಗೂ ಪೋಲೀಸರು ಬಂದು ಪರಿಶೀಲಿಸಿದಾಗ ಚಿನ್ನಾಭರಣ ಹಾಗೂ ನಗದು ಜೊತೆಗೆ ಸಿಸಿ ಕ್ಯಾಮರಾವನ್ನೂ ಕಳ್ಳರು ಹೊತ್ತೊಯ್ದಿರೋದು ಗೊತ್ತಾಗಿದೆ.

ಇನ್ನು ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಕಳವಾದ ಸೊತ್ತುಗಳ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!