Thursday, June 4, 2026
Homeತಾಜಾ ಸುದ್ದಿನಾಯಿಯೊಂದಿಗೆ ಆಟವಾಡುವ ವೇಳೆ ಜೋ ಬೈಡನ್ ಕಾಲು ಮೂಳೆ ಮುರಿತ

ನಾಯಿಯೊಂದಿಗೆ ಆಟವಾಡುವ ವೇಳೆ ಜೋ ಬೈಡನ್ ಕಾಲು ಮೂಳೆ ಮುರಿತ

- Advertisement -
- Advertisement -

ಅಮೇರಿಕಾ: ಅಮೇರಿಕಾ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಮುದ್ದಿನ ನಾಯಿ ಜೊತೆ ಆಟವಾಡುವಾಗ ಜಾರಿ ಬಿದ್ದು, ಕಾಲಿನ ಮೂಳೆ ಮುರಿದಿದೆ. ಹೀಗಾಗಿ  ಕೆಲವು ವಾರಗಳ ಮಟ್ಟಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ತಿಳಿಸಿದ್ದಾರೆ.

ನಿನ್ನೆ ತಮ್ಮ ನಾಯಿ ಮೇಜರ್ ಜತೆ ಆಟವಾಡುವಾಗ ಜೋ ಬೈಡನ್ ಕಾಲಿಗೆ ಏಟಾಗಿದೆ. ‘ಜೋ ಬೈಡನ್ ಅವರ ಪಾದದಲ್ಲಿ ತೆಳುವಾದ ಬಿರುಕು ಉಂಟಾಗಿರುವುದು ಸಿಟಿ ಸ್ಕ್ಯಾನ್ ಮಾಡಿದ ಬಳಿಕ ಪತ್ತೆಯಾಗಿದೆ. ಪಾದದ ಮಧ್ಯಭಾಗದಲ್ಲಿರುವ ಪಾರ್ಶ್ವದ ಅಂಚಿನ ಮೂಳೆಯಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದೆ. ಹೀಗಾಗಿ ಅವರಿಗೆ ಕೆಲವು ದಿನ ವಾಕಿಂಗ್ ಬೂಟ್ಸ್ ಅಗತ್ಯ ಬೀಳಬಹುದು’ ಎಂದು ಅವರ ವೈದ್ಯರು ಹೇಳಿದ್ದಾರೆ.

77 ವರ್ಷದ ಬೈಟನ್ ಅವರ ಬಳಿ ಮೇಜರ್ ಮತ್ತು ಚಾಂಪ್ ಎಂಬ ಎರಡು ಜರ್ಮನ್ ಶೆಫರ್ಡ್ ನಾಯಿಗಳಿವೆ. 2018ರ ನವೆಂಬರ್‌ನಲ್ಲಿ ಅವರು ಮೇಜರ್ ನಾಯಿಯನ್ನು ದತ್ತು ತೆಗೆದುಕೊಂಡಿದ್ದರು. 2008ರ ಡಿಸೆಂಬರ್‌ನಲ್ಲಿ ಬೈಡನ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಬೈಡನ್ ಕುಟುಂಬವನ್ನು ಚಾಂಪ್ ಸೇರಿಕೊಂಡಿತ್ತು.

- Advertisement -

Latest News

error: Content is protected !!