Thursday, June 4, 2026
Homeಕರಾವಳಿಉಡುಪಿಉಡುಪಿ: ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗೆ ಸಂದರ್ಶನ, SSLC ಆದವರಿಗೆ ಅವಕಾಶ

ಉಡುಪಿ: ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗೆ ಸಂದರ್ಶನ, SSLC ಆದವರಿಗೆ ಅವಕಾಶ

- Advertisement -
- Advertisement -

ಉಡುಪಿ: ಭಾರತೀಯ ಅಂಚೆ ಇಲಾಖೆಯ ವತಿಯಿಂದ ನಗರ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವವಿಮೆ ಹಾಗೂ ಗ್ರಾಮೀಣ ಅಂಚೆ ಜೀವವಿಮಾ ಏಜೆಂಟ್ ಆಗಿ ಕಾರ್ಯ ನಿರ್ವಹಿಸಲು 18ರಿಂದ 50 ವರ್ಷ ದೊಳಗಿನ, ಕನಿಷ್ಟ SSLC ತೇರ್ಗಡೆಗೊಂಡ ಅರ್ಹ ಅಭ್ಯರ್ಥಿ ಗಳಿಂದ ಅರ್ಜಿ ಯನ್ನು ಆಹ್ವಾನಿಸಲಾಗಿದೆ.

ಆಸಕ್ತರು ಆಧಾರ್‌ ಕಾರ್ಡ್, ಪಾನ್‌ಕಾರ್ಡ್, ಎಸೆಸೆಲ್ಸಿ ಅಂಕಪಟ್ಟಿ ಮೂಲ ಪ್ರತಿ, ಝೆರಾಕ್ಸ್ ಪ್ರತಿ ಮತ್ತು ಎರಡು ಪಾಸ್‌ಪೋರ್ಟ್ ಸೈಜಿನ ಭಾವಚಿತ್ರ ದೊಂದಿಗೆ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಜುಲೈ 30ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಸಂದರ್ಶನಕ್ಕೆ ಹಾಜರಾಗಬಹುದು.

ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ: 0820-2520471 ಅಥವಾ ಮೊ.ನಂ: 9448291071 ಅನ್ನು ಸಂಪರ್ಕಿಸುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!