Thursday, June 26, 2025
Homeಕರಾವಳಿಮಂಗಳೂರುಧರ್ಮಸ್ಥಳಕ್ಕೆ ಬಂದಿದ್ದ ಮಹಿಳೆಯ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ

ಧರ್ಮಸ್ಥಳಕ್ಕೆ ಬಂದಿದ್ದ ಮಹಿಳೆಯ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ

spot_img
- Advertisement -
- Advertisement -

ಧರ್ಮಸ್ಥಳಕ್ಕೆ ಬಂದಿದ್ದ ಮಹಿಳೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಲತಾ ಎಂಬ ಮಹಿಳೆ ದಿನಾಂಕ: 02-05-2025 ಅಂದ್ರಪ್ರದೇಶದ ನೆಲ್ಲೂರು ನಿಂದ ಒಂದು ಬಾಡಿಗೆ ಇನ್ನೋವಾ ಕಾರನಲ್ಲಿ ಹೊರಟು ದಿನಾಂಕ 03-05-2025 ರಂದು ಸಂಜೆ 05-00 ಘಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳಕ್ಕೆ ತಲುಪಿರುತ್ತಾರೆ. ದೇವರ ದರ್ಶನಕ್ಕೆ ಹೋಗುವ ಮೊದಲು ಲತಾ ಅವರು  ಕಾರ್ಯಕ್ರಮಕ್ಕೆಂದು ಜೊತೆಯಲ್ಲಿ ತಂದಿದ್ದ ಚಿನ್ನಭರಣಗಳಾದ ಬ್ರಾಸ್ ಲೈಟ್, ಚಿನ್ನದ ಚೈನ್, ನೆಕ್ಲೇಸ್ ನ್ನು ವ್ಯಾನಿಟಿಕ್ ಬ್ಯಾಗ್ ನ ಒಳಗಡೆ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಬ್ಯಾಗ್ ನಲ್ಲಿ ಇಟ್ಟುಕೊಂಡು ದೇವರ ದರ್ಶನವನ್ನು ಮುಗಿಸಿ ಹೊರಡುವ ಸಮಯದಲ್ಲಿ ಬ್ಯಾಗನ್ನು ನೋಡಿದಾಗ ವ್ಯಾನಿಟಿಕ್ ಬ್ಯಾಗಿನ ಜಿಪ್ಪು ತೆರೆದಿದ್ದು. ಬ್ಯಾಗ್ ನ ಒಳಗಡೆ ನೋಡಿದಾಗ ಬ್ಯಾಗ್ ನ ಒಳಗಡೇ ಪ್ಲಾಸ್ಟಿಕ್ ಬಾಕ್ಸ್ನಲ್ಲಿ ಇಟ್ಟಿದ್ದ 97 ಗ್ರಾಮ್ ತೂಕದ ಚಿನ್ನಾಭರಣಗಳು ಕಳವಾಗಿದ್ದು, ಒಟ್ಟು ಮೌಲ್ಯ ರೂ 6,79,000/- ಆಗಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಅ ಕ್ರ  17/2025 ಕಲಂ: 303(2) ಬಿಎನ್ ಎಸ್ 2023ಯಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -
spot_img

Latest News

error: Content is protected !!