- Advertisement -
- Advertisement -
ಬೆಂಗಳೂರು: ದಕ್ಷಿಣ ಕನ್ನಡಿಗರ ಸಂಘ ಬೆಂಗಳೂರು ಮತ್ತು ಆನಂದ ಬಳಗ ಬೆಂಗಳೂರು ಇವರ ವತಿಯಿಂದ ಡಾ. ಪಿ. ಜಯರಾಮ ಬಾಗಿಲ್ತಾಯ ಜನ್ಮ ಶತಾಬ್ದಿ ನೆನಪು-ನಮನ ಕಾರ್ಯಕ್ರಮ ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ನಿವೃತ್ತ ಐಎಎಸ್ ಅಧಿಕಾರಿ ಟಿ. ಶ್ಯಾಮ ಭಟ್, ಡಿ. ಸುರೇಂದ್ರ ಕುಮಾರ್, ವಾಗ್ಮಿ ಪ್ರೊ. ಕೆ.ಪಿ. ಪುತ್ತೂರಾಯ, ಶಿಕ್ಷಣ ತಜ್ಞ ಪ್ರೊ. ಕೆ.ಇ. ರಾಧಾಕೃಷ್ಣ ಭಾಗವಹಿಸಲಿದ್ದಾರೆ.
ಬೆಂಗಳೂರಿನ ರಿಚ್ಮಂಡ್ ಸರ್ಕಲ್ ನಲ್ಲಿರುವ ಉಡ್ ಲ್ಯಾಂಡ್ಸ್ ಹೋಟೆಲ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಲವ-ಕುಶ ಯಕ್ಷಗಾನ ಬಯಲಾಟ ನಡೆಯಲಿದೆ.
- Advertisement -