Friday, June 5, 2026
Homeಕರಾವಳಿಉಪ್ಪಿನಂಗಡಿ: ಅನಿತಾ ಬೀಡಿ ಮಾಲೀಕರ ಮನೆ ಮೇಲೆ ಐಟಿ ರೇಡ್

ಉಪ್ಪಿನಂಗಡಿ: ಅನಿತಾ ಬೀಡಿ ಮಾಲೀಕರ ಮನೆ ಮೇಲೆ ಐಟಿ ರೇಡ್

- Advertisement -
- Advertisement -

ಉಪ್ಪಿನಂಗಡಿ: ಅನಿತಾ ಬೀಡಿ ವರ್ಕ್ ಕಂಪೆನಿ ಮಾಲೀಕರ ಮನೆ ಮೇಲೆ ಐಟಿ ರೇಡ್ ಆಗಿದೆ.

ಉಪ್ಪಿನಂಗಡಿ ಸಮೀಪದ ಪೆರ್ನೆ ಎಂಬಲ್ಲಿರುವ ಅನಿತಾ ಬೀಡಿ ವರ್ಕ್ಸ್ ಮಾಲೀಕರ ಮಹಮ್ಮದ್ ಆಲಿ ಯಾನೆ ಮಮ್ಮು ಅವರ ಮನೆ ಮೇಲೆ ಐಟಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಪೆರ್ನೆ ಸಮೀಪ ಇರುವ ಅವರ ಮನೆ ಬಳಿಯೇ ಅನಿತಾ ಬೀಡಿ ಕಂಪೆನಿ ಕಾರ್ಯ ನಿರ್ವಹಿಸುತ್ತಿದೆ. ಆದಾಯ ತೆರಿಗೆ ಇಲಾಖೆಯ ಹಲವು ಅಧಿಕಾರಿಗಳಿಂದ ಮನೆ ಮತ್ತು ವರ್ಕ್ ಶಾಪ್ ಗೆ ಏಕ ಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಅಪ್ಡೇಟ್ ತಿಳಿದು ಬರಬೇಕಿದೆ.

- Advertisement -

Latest News

error: Content is protected !!