Monday, May 13, 2024
Homeಕರಾವಳಿಐಟಿ ಬಿಟಿಯಲ್ಲೂ ಉನ್ನತ ಸ್ಥಾನದ ಆಮಿಷ ನೀಡಿ ಮತಾಂತರ ಮಾಡಲಾಗುತ್ತಿದೆ; ಒಡಿಯೂರು ಮಠದ ಸ್ವಾಮೀಜಿ

ಐಟಿ ಬಿಟಿಯಲ್ಲೂ ಉನ್ನತ ಸ್ಥಾನದ ಆಮಿಷ ನೀಡಿ ಮತಾಂತರ ಮಾಡಲಾಗುತ್ತಿದೆ; ಒಡಿಯೂರು ಮಠದ ಸ್ವಾಮೀಜಿ

spot_img
- Advertisement -
- Advertisement -

ಮಂಗಳೂರು : ಹಿಂದು ಸಂಘಟನೆಗಳ ಮುಖಂಡರು ಮತ್ತು ಕರಾವಳಿಯ ಪ್ರಮುಖ ಸ್ವಾಮೀಜಿಗಳು ಸೇರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ರಾಜ್ಯದಲ್ಲಿ ಕಠಿಣ ಮತಾಂತರ ನಿಷೇಧ ಮಸೂದೆಯನ್ನು ಶೀಘ್ರದಲ್ಲೇ ಜಾರಿಗೆ ತರುವಂತೆ ಮನವಿ ಪತ್ರವನ್ನು ಕೊಟ್ಟಿದ್ದಾರೆ.

ಅಲ್ಲದೆ ಮನವಿಯನ್ನು ರಾಜ್ಯ ಸರಕಾರಕ್ಕೆ ತಲುಪಿಸಬೇಕು ಮತ್ತು ಶೀಘ್ರದಲ್ಲೇ ಅಧ್ಯಾದೇಶ ಹೊರಡಿಸಿ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿಯನ್ನು ಭೇಟಿಯಾದ ನಿಯೋಗದಲ್ಲಿ ಒಡಿಯೂರು ಮಠದ ಗುರುದೇವಾನಂದ ಸ್ವಾಮೀಜಿ, ಗುರುಪುರ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಸ್ವಾಮೀಜಿ, ವಿಶ್ವ ಹಿಂದು ಪರಿಷತ್ ಮುಖಂಡರಾಜ ಎಂ.ಬಿ. ಪುರಾಣಿಕ್, ಶರಣ್ ಪಂಪ್ವೆಲ್, ಗೋಪಾಲ ಕುತ್ತಾರ್ ಸೇರಿದಂತೆ ಹಲವರು ಇದ್ದರು. ಜಿಲ್ಲಾಧಿಕಾರಿ ಭೇಟಿಯ ಬಳಿಕ ಕದ್ರಿಯಲ್ಲಿರುವ ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಸ್ವಾಮೀಜಿಗಳು ಸುದ್ದಿಗೋಷ್ಠಿ ಕರೆದು ಮತಾಂತರ ನಿಷೇಧ ಅಗತ್ಯವನ್ನು ಹೇಳಿದರು.

ಮತಾಂತರ ಎಂಬುದು ಒಂದು ರೀತಿಯ ಖಾಯಿಲೆ ಇದ್ದಂತೆ. ಬಡವರಿಗೆ ಆಮಿಷವೊಡ್ಡಿ ಮತಾಂತರಕ್ಕೆ ಯತ್ನಿಸುತ್ತಿದೆ. ಐಟಿ ಬಿಟಿಯಲ್ಲೂ ಉನ್ನತ ಸ್ಥಾನದ ಆಮಿಷ ನೀಡಿ ಮತಾಂತರ ಮಾಡಲಾಗುತ್ತಿದೆ. ವಿದ್ಯಾವಂತರನ್ನು ಈ ರೀತಿ ಮತಾಂತರಿಸಿ, ಆನಂತರ ಮನೆಯವರನ್ನೂ ಮತಾಂತರಕ್ಕೆ ಬಲಿ ಕೊಡಲಾಗುತ್ತಿದೆ ಎಂದು ಒಡಿಯೂರು ಮಠದ ಸ್ವಾಮೀಜಿ ಹೇಳಿದರು.

ಇನ್ನು ಐಟಿ ಬಿಟಿ ಕಂಪನಿಗಳ ಚಟುವಟಿಕೆ ಹೊರ ಜಗತ್ತಿಗೆ ತಿಳಿಯುವುದೇ ಇಲ್ಲ. ರಾಜ್ಯದ ಎಲ್ಲಾ ನಗರಗಳಲ್ಲೂ ಇಂಥ ಚಟುವಟಿಕೆಗಳಾಗುತ್ತಿವೆ. ಮತಾಂತರಾಗದೆ ತಡೆಯುವುದು ಸರಕಾರದ ಕೆಲಸ ಅಲ್ಲದೆ, ಆಮಿಷವೊಡ್ಡಿ ಮತಾಂತರಿಸುವ ಕೆಲಸ ಆಗದಂತೆ ನೋಡಿಕೊಳ್ಳುವುದು ಸರಕಾರದ ಕೆಲಸ. ಅದನ್ನು ನಾವು ಪ್ರತಿಭಟನೆ ಇನ್ನೊಂದು ರೂಪದಲ್ಲಿ ನಿಯಂತ್ರಣಕ್ಕೆ ತರುವುದು ಸಾಧ್ಯವಿಲ್ಲ. ಅದಕ್ಕಾಗಿ ಕಠಿಣ ಕಾಯ್ದೆಯುಳ್ಳ ಕಾನೂನುಗಳೇ ಜಾರಿಗೆ ಬರಬೇಕು. ಈಗಾಗ್ಲೇ ಕಾನೂನು ತರುವ ಬಗ್ಗೆ ಸರಕಾರ ಹೇಳಿದೆ. ಅದನ್ನು ಅಧ್ಯಾದೇಶ ಮೂಲಕ ಜಾರಿಗೊಳಿಸಬೇಕು ಎಂದು ಗುರುಪುರ ಶ್ರೀ ಒತ್ತಾಯಿಸಿದರು.

ಯಾವುದೇ ವ್ಯಕ್ತಿ ಯಾವ ಧರ್ಮದಲ್ಲಿ ಹುಟ್ಟಿರುತ್ತಾನೋ, ಅದೇ ಧರ್ಮದಲ್ಲಿ ಸಾಯುವುದು ಆತನ ಹಕ್ಕು. ಯಾಕಾಗಿ ಅವರನ್ನು ಮತಾಂತರ ಮಾಡಬೇಕು. ದೇಶದಲ್ಲಿ ಹಿಂದುಗಳು ಮಾತ್ರ ಇವರ ಟಾರ್ಗೆಟ್ ಆಗಿದ್ದಾರೆ. ಲವ್ ಜಿಹಾದ್ ಒಂದೆಡೆಯಾದರೆ, ಮತ್ತೊಂದು ಕಡೆ ಬಲವಂತದ ಮತಾಂತರ ನಡೆಸಲಾಗುತ್ತಿದೆ. ಇದರ ವಿರುದ್ಧ ಪ್ರಬಲ ಕಾನೂನು ತರಬೇಕಿದೆ ಎಂದು ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್ ಹೇಳಿದರು.

ಸೆಕ್ಯುಲರಿಸಂ ಅನ್ನುವುದು ಹಿಂದುತ್ವದ ಗಿಫ್ಟ್. ಎಲ್ಲ ಮತಗಳನ್ನು ಸಮಾನವಾಗಿ ನೋಡು ಎನ್ನುವುದು ಹಿಂದುತ್ವದ ಕಲ್ಪನೆ. ಅದೇ ತತ್ವ ಸೆಕ್ಯುಲರಿಸಂ. ಆದರೆ, ಸೆಕ್ಯುಲರ್ ಆಗಿರುವ ಹಿಂದುಗಳೇ ಈಗ ಟಾರ್ಗೆಟ್ ಆಗಿದ್ದಾರೆ. ಕೇರಳದಲ್ಲಿ ಕೆಲವೊಂದು ರಿಜಿಸ್ಟರ್ ಕೇಂದ್ರಗಳಲ್ಲಿ 80 ಶೇಕಡಾ ಮ್ಯಾರೇಜ್ ರಿಜಿಸ್ಟರ್ ಆಗುವುದು ಹಿಂದು- ಮುಸ್ಲಿಂ ನಡುವೆ. ಈ ಬಗ್ಗೆ ಖಚಿತ ದಾಖಲೆಗಳಿದ್ದು, ಹಿಂದು ಹೆಣ್ಮಕ್ಕಳನ್ನೇ ಟಾರ್ಗೆಟ್ ಮಾಡಿ ಮತಾಂತರ ಮಾಡಲಾಗುತ್ತಿದೆ. ಧಾರ್ಮಿಕ ಕೇಂದ್ರಗಳು ನಡೆಸುವ ಶಿಕ್ಷಣ ಕೇಂದ್ರಗಳಲ್ಲೂ ಮತಾಂತರ ಕಾರ್ಯ ನಡೆಯುತ್ತಿದೆ ಎಂದು ಕಾಸರಗೋಡಿನ ವಿದ್ಯಾನಂದ ಸರಸ್ವತಿ ಹೇಳಿದ್ದಾರೆ.

- Advertisement -
spot_img

Latest News

error: Content is protected !!