Wednesday, July 2, 2025
Homeಕರಾವಳಿಈಶ್ವರಮಂಗಳ : ವಕೀಲಿ ಗೌನು ಹಾಕಿ ವಾದ ಮಾಡುವ ಕಾನೂನು ವಿದ್ಯಾರ್ಥಿ ಮೀನು ಮಾರಿದಾಗ

ಈಶ್ವರಮಂಗಳ : ವಕೀಲಿ ಗೌನು ಹಾಕಿ ವಾದ ಮಾಡುವ ಕಾನೂನು ವಿದ್ಯಾರ್ಥಿ ಮೀನು ಮಾರಿದಾಗ

spot_img
- Advertisement -
- Advertisement -

ಪುತ್ತೂರು : ಮಾತಿನಲ್ಲಿ‌ ಹೇಳುವುದಷ್ಟೆ ಕೆಲವರದು ಚಟವಾದರೆ ಇನ್ನು ಕೆಲವರದು ಮಾತಿನಲ್ಲಿ ಹೇಳಿದನ್ನು ಕಾರ್ಯರೂಪಕ್ಕೆ ತಂದು ತೋರಿಸುವವರು ಇದ್ದಾರೆ, ಇದಕ್ಕೆ ಒಂದು ಉದಾಹರಣೆ ನಮ್ಮ ಕಣ್ಣು ಮುಂದೆಯೆ ನೋಡುತ್ತಿದ್ದೇವೆ. ಇಡೀ ದೇಶವೆ ಕೆಲವು ತಿಂಗಳಿನಿಂದ ಕೊರೋನ ಎಂಬ ಮಹಾಮಾರಿ ರೋಗಕ್ಕೆ ಹೆದರಿ ಲಾಕ್ಡೌನ್ ಹೇರಿದ್ದು ಜನರು ಎಲ್ಲಾ ವಿಷಯಗಳಲ್ಲೂ ಸಂಕಷ್ಟಕ್ಕೆ ಸಿಲುಕಿದ್ದರು, ಅಂಗಡಿ ಮುಂಗಟ್ಟುಗಳು ಬಂದ್, ದಿನ ಬಳಕೆಗೆ ಬೇಕಾದ ಆಹಾರ ಪದಾರ್ಥಗಳು ಸರಿಯಾಗಿ ಸಿಗುತ್ತಿಲ್ಲ, ಮೊದಲಿನಂತೆ ಜನಜಂಗುಲಿ ಸೇರುವ ಹಾಗಿಲ್ಲ ಇದೆಲ್ಲವೂ ಜನರನ್ನು ತುಂಬ ಸಂಕಷ್ಟ ತಂದೊಡ್ಡಿದೆ. ಇದೀಗ ಲಾಕ್ಡೌನ್ ಸ್ವಲ್ಪ ಮಟ್ಟಿಗೆ ಸಡಿಲಗೊಂಡಿದೆ ಆದರೆ ಕೆಲವೊಂದು ದಿನ ಬಳಕೆ ಸಾಮಾಗ್ರಿಗಳೂ, ಆಹಾರ ಪದಾರ್ಥಗಳನ್ನು ಖರಿದಿಸಬೇಕಾದರೆ ದುಪ್ಪಟ್ಟು ವೆಚ್ಚಗಳನ್ನು ನೀಡಬೇಕಾಗುತ್ತದೆ, ಇದೆಲ್ಲವನ್ನು ಅರಿತ ಜನಗಳು ತಲೆ ಮೇಲೆ ಕೈ ಇಟ್ಟು ಯೋಚಿಸುವಂತೆ ಮಾಡುತ್ತಿರುವುದು ತಪ್ಪಲ್ಲ. ಕೆಲವು ತಿಂಗಳಿನಿಂದ ಕೆಲಸವಿಲ್ಲದೆ ಪರದಾಡುವ ದಿನಗಳಲ್ಲಿ ಮೊದಲಿನಂತೆ ಜೀವನ ನಡೆಸುವುದಕ್ಕೆ ಜನರು ಬಹಳಷ್ಟು ಕಷ್ಟ ಅನುಭವಿಸಿದ್ದಾರೆ.

ಲಾಕ್ಡೌನ್ ಕಾರಣವೊಡ್ಡಿ ಕೆಲ ವ್ಯಾಪಾರಸ್ಥರು ಮನಬಂದಂತೆ ದರ ಏರಿಸುವ ಮೂಲಕ ಜಾನ್ಮೆತನವನ್ನು ತೋರಿಸುತ್ತಾರೆ, ಆದರೆ ಇದನ್ನೆ ಒಂದು ಸವಾಲಾಗಿ ಸ್ವೀಕರಿಸಿರುವ ಒಬ್ಬ ವಿದ್ಯಾರ್ಥಿ ಇದೀಗ ತನ್ನೋರಿನ ರಸ್ತೆ ಬದಿಯಲ್ಲಿ ತಾನು ಒಂದು ಸಣ್ಣ ವ್ಯಾಪಾರ ಪ್ರಾರಂಭಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯೆಂದರೆ ಮೀನು ವ್ಯಾಪಾರ ಇಲ್ಲಿ ಅತಿ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ . ಪುತ್ತೂರಿನ ಖಾಸಗಿ ಕಾಲೇಜೊಂದರಲ್ಲಿ LLB ಓದುತ್ತಿರುವ ಚಂದ್ರಹಾಸ ಈಶ್ವರಮಂಗಳ ರವರು ಬಿಡುವಿನ ಸಮಯದಲ್ಲಿ ಇದೀಗ ಹೊಸತಾಗಿ ಮೀನಿನ ವ್ಯಾಪಾರವನ್ನು ಪ್ರಾರಂಭಿಸಿದ್ದಾರೆ, ಕೇವಲ ಮಾತಿನಲ್ಲಿ‌ ಮಾತ್ರವಲ್ಲದೆ ಕೃತಿಯಲ್ಲಿ ತೋರಿಸುವಂತ ಛಲ ಹೊಂದಿರುವ ಚಂದ್ರಹಾಸರವರು ವ್ಯಪಾರಕ್ಕೆ ಧರ್ಮವಿಲ್ಲ ಎಂಬ ಸಂದೇಶವನ್ನು ಈ ಮೂಲಕ ಜನರಿಗೆ ತೋರಿಸಿಕೊಟ್ಟಂತಿದೆ. ಕೆಲಸವಿಲ್ಲ ಎಂದು ಊರೆಲ್ಲ ಸುಖ ಸುಮ್ಮನೆ ಸುತ್ತಾಡುವ ಅದೇಷ್ಟೊ ಜನಗಳು ನಮ್ಮ ಕಣ್ಣ ಮುಂದೆ ಸಿಗುತ್ತಾರೆ, ಇನ್ನು ಕೆಲವರು ಕೆಲಸವಿಲ್ಲ ಎಂಬ ಕಾರಣಕ್ಕೆ ಜಿಗುಪ್ಸೆಗೊಂಡು ಆತ್ಮಹತ್ಯೆಯಂತಹ ಹಾದಿಯನ್ನು ಹಿಡಿಯುತ್ತಾರೆ ಅಂತಹವರಿಗೆಲ್ಲ ಚಂದ್ರಹಾಸರವರ ಮೀನಿನ ವ್ಯಾಪಾರ ಉಳಿದವರಿಗೆಲ್ಲ ಪಾಠ ಕಲಿಸಿದಂತಿದೆ. ವ್ಯಾಪಾರ ಯಾವುದೇ ಆಗಿರಲಿ ಅದು ಕೇವಲ ಒಂದು ಜನಾಂಗಕ್ಕೆ ಅಥವಾ ಒಂದು ಧರ್ಮಕ್ಕೆ ಸೀಮಿತವಲ್ಲ ಮನಸಿದ್ದರೆ ಮಾರ್ಗ ಎಂಬಂತೆ ಒಬ್ಬ ಕಾನೂನು ಪದವಿ ಓದುವ ವಿದ್ಯಾರ್ಥಿ ಯಾವುದೇ ಅಂಜಿಕೆಯಿಲ್ಲದೆ ತನ್ನ ಸಹೋದರ ಮತ್ತು ಗೆಳೆಯರ ಸಹಕಾರದಿಂದ ತನ್ನ ಊರಿನಲ್ಲಿ ರಸ್ತೆ ಬದಿ ನಿಂತು ಮೀನಿನ ವ್ಯಾಪಾರ ಮಾಡುವ ಮೂಲಕ ಸಮಯವನ್ನು ಹೇಗೆ ಸದುಮಯೋಗ ಪಡಿಸಿಕೊಳ್ಳಬೇಕು ಎಂದು ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ, ವ್ಯಾಪಾರ ನಡೆಸುವುದಕ್ಕೆ ಬಡವ ಬಲ್ಲಿದನೆಂಬ ಕಾರಣ ಹುಡುಕುವ ಕೆಲ ಜನಗಳ ನಡುವೆ ಮನಸ್ಸಿದ್ದರೆ ಯಾವ ಕೆಲಸವೂ ಕಷ್ಟವೇನಲ್ಲ ಎಂಬುದನ್ನು LLB ಓದುತ್ತಿರುವ ವಿದ್ಯಾರ್ಥಿ ತೋರಿಸಿಕೊಟ್ಟಿದ್ದಾರೆ, ತಾಜಾ ಶುಧ್ದ ಮಾಂಸವನ್ನೆ ಜನರಿಗೆ ನೀಡುವ ಮೂಲಕ ಜನರ ವಿಶ್ವಾಸಗಳಿಸಿದ ಚಂದ್ರಹಾಸ್ ರವರ ಈ ಕಾರ್ಯಕ್ಕೆ ಎಲ್ಲಕಡೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಬುದ್ದಿವಂತರ ಜಿಲ್ಲೆಯೆಂದೆ ಹೆಸರುಗಳಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಚಂದ್ರಹಾಸ್ ರವರ ಈ ಬುದ್ದಿವಂತಿಕೆ ಎಲ್ಲರಿಗೂ ಮಾದರಿಯಾಗಲಿ.

ವರದಿ : ಹರೀಶ್ ಪುತ್ತೂರು,ವಿದ್ಯಾ ಆರ್ಟ್ ಕ್ರಿಯೇಷನ್ಸ್

- Advertisement -
spot_img

Latest News

error: Content is protected !!