Saturday, June 6, 2026
Homeತಾಜಾ ಸುದ್ದಿಕಂಬಳ ಕ್ಷೇತ್ರದ ಸಾಧಕ ಇರುವೈಲ್ ಪಾಣಿಲ ಬಾಡ ಪೂಜಾರಿ ನಿಧನ

ಕಂಬಳ ಕ್ಷೇತ್ರದ ಸಾಧಕ ಇರುವೈಲ್ ಪಾಣಿಲ ಬಾಡ ಪೂಜಾರಿ ನಿಧನ

- Advertisement -
- Advertisement -

ಬಂಟ್ವಾಳ: ಕಂಬಳ ಕ್ಷೇತ್ರದ ಹಿರಿಯ ಮುತ್ಸದ್ದಿ, ಸಾಧಕ ಇರುವೈಲ್ ಪಾಣಿಲ ಬಾಡ ಪೂಜಾರಿ ಅವರು ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಇಂದು ನಿಧನರಾಗಿದ್ದಾರೆ.

ಕಂಬಳ ಕ್ಷೇತ್ರದಲ್ಲಿ ಇವರ ಯಜಮಾನ ನೇತೃತ್ವದಲ್ಲಿ ಕೋಣಗಳು ವಿಶೇಷ ಸಾಧನೆ ಮಾಡಿದ್ದವು.  ಇವರ ಯಜಾಮಾನಿಕೆಯಲ್ಲಿ ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಅಶ್ವತ್‌ಪುರದ ಶ್ರೀನಿವಾಸ ಗೌಡ ಕಂಬಳದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಬಾಡ ಪೂಜಾರಿಯವರ ಕೋಣಗಳು ಅನೇಕ ಪದಕಗಳನ್ನು ಹಾಗೂ ದಾಖಲೆಗಳನ್ನು ನಿರ್ಮಿಸಿದ್ದವು.

- Advertisement -

Latest News

error: Content is protected !!