Thursday, June 4, 2026
Homeಕರಾವಳಿಉಡುಪಿರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಸಾಣೂರಿನ ಅಶ್ನಿ ಕೋಟ್ಯಾನ್, ಅನ್ವಿ ಕೋಟ್ಯಾನ್ ಆಯ್ಕೆ

ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಸಾಣೂರಿನ ಅಶ್ನಿ ಕೋಟ್ಯಾನ್, ಅನ್ವಿ ಕೋಟ್ಯಾನ್ ಆಯ್ಕೆ

- Advertisement -
- Advertisement -

ಕಾರ್ಕಳ : ಅಂಡಮಾನ್ ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಸಾಣೂರಿನ ಅಶ್ನಿ ಕೋಟ್ಯಾನ್ ಮತ್ತು ಅನ್ವಿ ಕೋಟ್ಯಾನ್ ಸಹೋದರಿಯರು ಆಯ್ಕೆಯಾಗಿದ್ದಾರೆ .

ವರ್ಷಿಣಿ ಯೋಗ ಎಜುಕೇಶನ್ ಮತ್ತು ಕಲ್ಬರಲ್ ಸ್ಪೋರ್ಟ್ಸ್ ಶಿವಮೊಗ್ಗ ಹಾಗೂ ಹುಬ್ಬಳ್ಳಿಯ ಧ್ಯಾನಜ್ಯೋತಿ ಯೋಗ ಎಜುಕೇಶನ್ ಸ್ಪೋರ್ಟ್ಸ್ ಸೋಷಿಯಲ್ ಮತ್ತು ಕಲ್ಟರಲ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಅಂತಾರಾಜ್ಯ ಆನ್ ಲೈನ್ ಯೋಗ ಚಾಂಪಿಯನ್ ಷಿಪ್ ನಲ್ಲಿ ಇವರು ದ್ವಿತೀಯ ಸ್ಥಾನ ಪಡೆದಿದ್ದರು.

ಅಶೋಕ್ ಕೋಟ್ಯಾನ್ – ಸೌಮ್ಯ ದಂಪತಿಯ ಪುತ್ರಿಯರಾಗಿರುವ ಇವರು ಕಾರ್ಕಳದ ಕೆ.ನರೇಂದ್ರ ಕಾಮತ್ ಮತ್ತು ಕೆ.ಅಶೋಕ್ ಕುಮಾರ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ .

- Advertisement -

Latest News

error: Content is protected !!