Sunday, May 5, 2024
Homeಕರಾವಳಿಕಾರ್ಕಳದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಕಾರ್ಯಕ್ರಮ

ಕಾರ್ಕಳದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಕಾರ್ಯಕ್ರಮ

spot_img
- Advertisement -
- Advertisement -

ಕಾರ್ಕಳ:ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ.ಐ.ಕ್ಯು.ಎ. ಸಿ ಭಾಗ,ಎನ್.ಎಸ್.ಎಸ್,ಕ್ರೀಡಾವಿಭಾಗ,ಯೂತ್ ರೆಡ್ ಕ್ರಾಸ್ ರಾಷ್ಟ್ರೀಯ ಸೇವಾ ವಿಭಾಗ ಇದರ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಡಿ.ವೈ.ಎಸ್.ಪಿ ವಿಜಯ್ ಪ್ರಸಾದ್, ಕಾರ್ಕಳ ಸರ್ಕಲ್ ಇನ್ಸ್ಪೆಕ್ಟರ್ ಸಂಪತ್,ಕಾರ್ಕಳ ಪಿ.ಎಸ್.ಐ ಪ್ರಸನ್ನ ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಡಿ.ವೈ.ಎಸ್.ಪಿ.ವಿಜಯ್ ರವರು ಮಾತನಾಡಿದ ಡ್ರಗ್ಸ್ ನ ವಿಧಗಳು ಅದರ ಸೇವನೆಯಿಂದ ಆಗುವ ಪರಿಣಾಮ ಅದರಿಂದ ಸಮಾಜದಲ್ಲಿ ಎಸಗುವ ಕೃತ್ಯಗಳ ಕುರಿತಾಗಿ ಹಾಗೆಯೇ ವಿದ್ಯಾರ್ಥಿ ಜೀವನ ವೆಂದರೆ ತಪಸ್ಸು,ಇವರು ಉತ್ತಮ ನಾಗರಿಕರಾಗಬೇಕು ಎಂದರು.ನಂತರ ಕಾರ್ಕಳ ಪಿ.ಎಸ್.ಐ ಪ್ರಸನ್ನ ರವರು ಮಾತನಾಡಿ ಮಾದಕ ದ್ರವ್ಯಗಳ ಸೇವನೆಯಿಂದ ಮಾನಸಿಕ ದೈಹಿಕ ಹಾನಿಯಾಗಿ ತನ್ನನ್ನು ತಾನೇ ಕೊಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಒಂದು ಉದಾಹರಣೆ ಮೂಲಕ ತಿಳಿಸಿದರು.

ನಂತರ ಸರ್ಕಲ್ ಇನ್ಸ್ಪೆಕ್ಟರ್ ಸಂಪತ್ ರವರು ಮಾತನಾಡಿ ಡ್ರಗ್ಸ್ ನಿಂದ ಬಂದ ಹಣ ಹೇಗೆ ಬೇರೆ ರಾಷ್ಟ್ರಗಳು ಭಯೋತ್ಪಾದನೆ ಗೆ ಬಳಸುತ್ತವೆ ಎಂದು ಡ್ರಗ್ಸ್ ನ ಜಾಲದ ಕುರಿತಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವರ್ಮಾ ಅಜ್ರಿಯವರು ಅಧ್ಯಕ್ಷತೆ ವಹಿಸಿದ್ದರು.ಸಹಾಯಕ ಪ್ರಾಧ್ಯಾಪಕರಾದ ಮಂಜುನಾಥ್,ಮೈತ್ರಿ ಕಾಲೇಜು  ಉಪನ್ಯಾಸಕರಾದ ಸೌಮ್ಯ,ಭಾಗ್ಯಲಕ್ಷ್ಮಿ, ಅಶ್ವಿನಿ,ಶ್ಯಾಮ್ ಉಪಸ್ಥಿತರಿದ್ದರು. ಮಂಜುನಾಥ್ ಸ್ವಾಗತಗೈದರು.ಮೈತ್ರಿಯವರು ಧನ್ಯವಾದಗೈದರು.ಅಜಿತ್ ಕಾರ್ಯಕ್ರಮ ನಿರೂಪಿಸಿದರು.

- Advertisement -
spot_img

Latest News

error: Content is protected !!