Saturday, June 6, 2026
Homeತಾಜಾ ಸುದ್ದಿಅಪಘಾತವಾದ ವ್ಯಕ್ತಿಯನ್ನು‌ ಆಸ್ಪತ್ರೆಗೆ ಸಾಗಿಸುವಾಗ ಆಂಬ್ಯುಲೆನ್ಸ್ ಬಾಗಿಲು‌ ಜಾಮ್ ಆಗಿ ಗಾಯಾಳು‌ ಸಾವು

ಅಪಘಾತವಾದ ವ್ಯಕ್ತಿಯನ್ನು‌ ಆಸ್ಪತ್ರೆಗೆ ಸಾಗಿಸುವಾಗ ಆಂಬ್ಯುಲೆನ್ಸ್ ಬಾಗಿಲು‌ ಜಾಮ್ ಆಗಿ ಗಾಯಾಳು‌ ಸಾವು

- Advertisement -
- Advertisement -

ಕೇರಳ:ಅಪಘಾತವಾದ ವ್ಯಕ್ತಿಯನ್ನು‌ ಆಸ್ಪತ್ರೆಗೆ ಸಾಗಿಸುವಾಗ ಆಂಬ್ಯುಲೆನ್ಸ್ ಬಾಗಿಲು‌ ಜಾಮ್ ಆಗಿ ಗಾಯಾಳು‌ ಸಾವನ್ನಪ್ಪಿರುವ ಘಟನೆ ಕೇರಳದ ಕಲ್ಲಿಕೋಟೆಯಲ್ಲಿ ನಡೆದಿದೆ.

ಫೆರೋಕೆ ನಗರದ ಕೊಯಮೊನ್‌(66) ಎಂಬ ವ್ಯಕ್ತಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಆತನಿಗೆ ಅಪಘಾತವಾಗಿದೆ. ಸ್ಥಳೀಯರು ತಕ್ಷಣ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಆಂಬ್ಯುಲೆನ್ಸ್‌ ಗಾಯಾಳುವನ್ನು ಕಲ್ಲಿಕೋಟೆ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದೆ.

ಆದರೆ ಆಸ್ಪತ್ರೆಯ ಬಳಿ   ಆಂಬ್ಯುಲೆನ್ಸ್‌ನ ಬಾಗಿಲು ಜಾಮ್‌ ಆಗಿದ್ದರಿಂದಾಗಿ ಸುಮಾರು ಅರ್ಧ ಗಂಟೆ ಕಾಲ ಬಾಗಿಲು ತೆರೆಯಲಾಗಿಲ್ಲ. ನಂತರ ಸ್ಥಳೀಯರು ಆಂಬ್ಯುಲೆನ್ಸ್‌ ಕಿಟಕಿ ಒಡೆದು, ಬಾಗಿಲು ತೆರೆದಿದ್ದಾರೆ. ಆದರೆ ಅಷ್ಟರಲ್ಲಿ ಕೊಯಮೊನ್ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!