Friday, March 29, 2024
Homeತಾಜಾ ಸುದ್ದಿರಾಜ್ಯದ ಯಾವ ಜಿಲ್ಲೆ ಯಾವ ವಲಯಕ್ಕೆ ಸೇರುತ್ತದೆ.? ಇಲ್ಲಿದೆ ಕಂಪ್ಲೀಟ್ ಲಿಸ್ಟ್..

ರಾಜ್ಯದ ಯಾವ ಜಿಲ್ಲೆ ಯಾವ ವಲಯಕ್ಕೆ ಸೇರುತ್ತದೆ.? ಇಲ್ಲಿದೆ ಕಂಪ್ಲೀಟ್ ಲಿಸ್ಟ್..

spot_img
- Advertisement -
- Advertisement -

 ಮಹಾಮಾರಿ ಕರೋನಾ ಈಗ ವಿಶ್ವದಾದ್ಯಂತ ತನ್ನ ಅಟ್ಟಹಾಸ ಮೆರೆಯುತ್ತಿದ್ದು ಇದಕ್ಕೆ ಈಗಾಗಲೇ ಲಕ್ಷಾಂತರ ಮಂದಿ ಬಲಿಯಾಗಿದ್ದಾರೆ. ಭಾರತದಲ್ಲೂ ಕರೋನಾದ ಕರಿನೆರಳು ಚಾಚಿದ್ದು, ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಕರೋನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿರುವ ಕೇಂದ್ರ ಸರ್ಕಾರ, ಸೋಂಕಿನ ಪ್ರಮಾಣವನ್ನು ಆಧರಿಸಿ ರೆಡ್, ಆರೆಂಜ್ ಹಾಗೂ ಗ್ರೀನ್ ವಲಯಗಳನ್ನಾಗಿ ವಿಂಗಡಿಸಿದೆ. ಅಲ್ಲದೆ ಈ ವಲಯಗಳ ಆರ್ಥಿಕ ಪುನಶ್ಚೇತನಕ್ಕಾಗಿ ವಿವಿಧ ಹಂತಗಳ ರಿಯಾಯಿತಿಗಳನ್ನು ನೀಡಲಾಗಿದೆ.

ರಾಜ್ಯದ ಯಾವ ಜಿಲ್ಲೆ ಯಾವ ವಲಯಕ್ಕೆ ಸೇರ್ಪಡೆಯಾಗಿದೆ ಎಂಬುದರ ರಾಜ್ಯ ಸರ್ಕಾರದ ಪಟ್ಟಿ ಇಲ್ಲಿದೆ.

ರೆಡ್ ಜೋನ್: ಬಾಗಲಕೋಟೆ, ಬೆಳಗಾವಿ, ಬೆಂಗಳೂರು, ಬೀದರ್, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ, ಕಲಬುರಗಿ, ಮಂಡ್ಯ, ಮೈಸೂರು, ತುಮಕೂರು, ವಿಜಯಪುರ.

ಆರೆಂಜ್ ಜೋನ್: ಬಳ್ಳಾರಿ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ.

ಗ್ರೀನ್ ಜೋನ್: ಶಿವಮೊಗ್ಗ, ಹಾಸನ, ರಾಮನಗರ, ಚಾಮರಾಜನಗರ, ಚಿಕ್ಕಮಗಳೂರು, ರಾಯಚೂರು, ಕೊಪ್ಪಳ, ಯಾದಗಿರಿ, ಹಾವೇರಿ, ಚಿತ್ರದುರ್ಗ, ಕೊಡಗು ಹಾಗೂ ಕೋಲಾರ.

- Advertisement -
spot_img

Latest News

error: Content is protected !!