Thursday, March 28, 2024
Homeಕ್ರೀಡೆIndia vs England 2nd Test: ಅಶ್ವಿನ್ ಸ್ಪಿನ್ ಮೋಡಿಗೆ ಇಂಗ್ಲೆಂಡ್ ತತ್ತರ

India vs England 2nd Test: ಅಶ್ವಿನ್ ಸ್ಪಿನ್ ಮೋಡಿಗೆ ಇಂಗ್ಲೆಂಡ್ ತತ್ತರ

spot_img
- Advertisement -
- Advertisement -

ಚೆನ್ನೈ: ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ರವಿಚಂದ್ರನ್ ಅಶ್ವಿನ್ ಸೇರಿದಂತೆ ಭಾರತೀಯ ಬೌಲರ್ ಗಳ ಬಿಗುದಾಳಿಗೆ ನಲುಗಿದ ಇಂಗ್ಲೆಂಡ್ ತಂಡ ಕೇವಲ 134 ರನ್ ಗೆ ಆಲ್ ಔಟ್ ಆಗಿದೆ.

ಟೀಮ್ ಇಂಡಿಯಾ ನೀಡಿದ 329 ರನ್​ಗಳನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಮೊದಲ ಓವರ್​ನಲ್ಲೇ ಇಶಾಂತ್ ಶರ್ಮಾ ಆಘಾತ ನೀಡಿದ್ದರು. ಆರಂಭಿಕ ಆಟಗಾರ ರೋಯ್ ಬರ್ನ್ಸ್​ರನ್ನು ಎಲ್​ಬಿ ಬಲೆಗೆ ಕೆಡವಿದ ಇಶಾಂತ್ ಮೊದಲ ಯಶಸ್ಸು ತಂದುಕೊಟ್ಟರು. ಆ ಬಳಿಕ ದಾಳಿಗಿಳಿದ ಆರ್​. ಅಶ್ವಿನ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿ ಆಂಗ್ಲರಿಗೆ ಶಾಕ್ ನೀಡಿದರು. ಇಂಗ್ಲೆಂಡ್ ಪರ ವಿಕೆಟ್ ಕೀಪರ್ ಫೋಕ್ಸ್ ಹೊರತುಪಡಿಸಿ ಯಾರೊಬ್ಬರು ಕ್ರೀಸ್ ಕಚ್ಚಿ ನಿಲ್ಲಲಿಲ್ಲ. ಫೋಕ್ಸ್ ಅಜೇಯ 42 ರನ್ ಗಳಿಸಿದರು. ಉಳಿದಂತೆ 22 ರನ್ ಗಳಿಸಿದ ಒಲಿ ಪೋಪ್ ಅವರದ್ದೇ ಹೆಚ್ಚಿನ ಗಳಿಕೆ.

ಪರಿಣಾಮ ಇಂಗ್ಲೆಂಡ್ ಕೇವಲ 134 ರನ್​ಗಳಿಗೆ ಸರ್ವಪತನ ಕಂಡಿತು. ಭಾರತದ ಪರ ರವಿಚಂದ್ರನ್ ಅಶ್ವಿನ್ 43 ರನ್​ಗಳಿಗೆ 5 ವಿಕೆಟ್ ಪಡೆದು ಮಿಂಚಿದ್ರೆ, ಇಶಾಂತ್ ಶರ್ಮಾ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ಕಬಳಿಸಿದರು. ಒಂದು ವಿಕೆಟ್ ಸಿರಾಜ್ ಪಾಲಾಯಿತು.

ಚೆಪಾಕ್‌ನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ 6 ವಿಕೆಟ್‌ಗೆ 300 ರನ್‌ಗಳಿಂದ ದಿನದಾಟ ಆರಂಭಿಸಿದ ಭಾರತ ತಂಡ 329 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಇಂಗ್ಲೆಂಡ್ ತಂಡ ರನ್ ಗಳಿಸಲು ಪರದಾಡಿ ಕೇವಲ 134 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ 195 ರನ್ ಮುನ್ನಡೆ ಸಂಪಾದಿಸಿದ ಭಾರತ ತಂಡ 2ನೇ ಸರದಿಯಲ್ಲಿ ದಿನದಂತ್ಯಕ್ಕೆ 1 ವಿಕೆಟ್‌ಗೆ 54 ರನ್ ಪೇರಿಸಿತು. ಆರಂಭಿಕ ಶುಭಮಾನ್ ಗಿಲ್ (14) ಮತ್ತೊಮ್ಮೆ ವೈಲ್ಯ ಕಂಡರೆ, ಮೊದಲ ಇನಿಂಗ್ಸ್ ಶತಕವೀರ ರೋಹಿತ್ ಶರ್ಮ (25) ಮತ್ತು ಚೇತೇಶ್ವರ ಪೂಜಾರ (7) ಕ್ರೀಸ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿ ಪಡೆ ಈಗ ಒಟ್ಟು 249 ರನ್ ಮುನ್ನಡೆ ಸಾಧಿಸಿ ಬಲಿಷ್ಠ ಸ್ಥಿತಿಯಲ್ಲಿದೆ.

- Advertisement -
spot_img

Latest News

error: Content is protected !!