Thursday, June 25, 2026
Homeಅಪರಾಧಸಾರ್ವಜನಿಕವಾಗಿ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ನಿಂದ ಅಸಭ್ಯ ವರ್ತನೆ: ಪ್ರಕರಣ ದಾಖಲು

ಸಾರ್ವಜನಿಕವಾಗಿ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ನಿಂದ ಅಸಭ್ಯ ವರ್ತನೆ: ಪ್ರಕರಣ ದಾಖಲು

- Advertisement -
- Advertisement -

ಉಡುಪಿ: ಮಣಿಪಾಲ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ಒಬ್ಬರು ಸಾರ್ವಜನಿಕವಾಗಿ ವ್ಯಕ್ತಿಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಿಬಂದಿ ವಿರುದ್ಧ ಪೊಲೀಸರೇ ಸುಮೊಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಣಿಪಾಲ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ಶರಣ ಬಸವ ವಿರುದ್ಧ ಕರ್ನಾಟಕ ಪೊಲೀಸ್‌ ಕಾಯ್ದೆ ಕಲಂ. 92(ಒ)ಮತ್ತು (ಆರ್‌) ರಂತೆ ಪ್ರಕರಣ ದಾಖಲಾಗಿದೆ.

ಸುಮಂತ್‌ ಎನ್ನುವ ವ್ಯಕ್ತಿಯೊಂದಿಗೆ ಶರಣ ಬಸವ ಅವರು ಮಾ. 27ರಂದು ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ್ದರು. ಈ ಬಗ್ಗೆ ಸುಮಂತ್‌ ಪೊಲೀಸರ ಗಮನಕ್ಕೆ ತಂದಿದ್ದರೂ ದೂರು ದಾಖಲಿಸುವುದು ಬೇಡ ಎಂದು ತಿಳಿಸಿದ್ದರು.

ಆದರೆ ಈ ಪ್ರಕರಣ ಬಗ್ಗೆ ಪೊಲೀಸ್‌ ಇಲಾಖೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ ಎನ್ನಲಾಗಿದೆ.

- Advertisement -

Latest News

error: Content is protected !!