Friday, June 27, 2025
Homeಕರಾವಳಿಮಂಗಳೂರುಉಪ್ಪಿನಂಗಡಿ: ಆಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಉಪ್ಪಿನಂಗಡಿ: ಆಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

spot_img
- Advertisement -
- Advertisement -

ಉಪ್ಪಿನಂಗಡಿ: ಆಂಬ್ಯುಲೆನ್ಸ್ ನಲ್ಲೇ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಬಂಟ್ವಾಳ ತಾಲೂಕು ಕಕ್ಕೆಪದವಿನ  ಉಮೇಶ್ ಎಂಬವರ ಪತ್ನಿ ಪವಿತ್ರಾ ಆಸ್ಪತ್ರೆಗೆ ಹೋಗಲು 108 ಆಂಬುಲೆನ್ಸ್‌ ಗಾಗಿ ಕರೆ ಮಾಡಿದಾಗ ಎರಡೂ ಆಂಬ್ಯುಲೆನ್ಸ್ ಗಳು ಕರ್ತವ್ಯದಲ್ಲಿ ಬೇರೆಡೆ ಇದ್ದ ಕಾರಣ, ಉಪ್ಪಿನಂಗಡಿಯಲ್ಲಿದ್ದ ಆಂಬ್ಯುಲೆನ್ಸ್ ನ್ನು ಕರೆಸಲಾಗಿತ್ತು.

ಉಪ್ಪಿನಂಗಡಿಯಿಂದ ಕಕ್ಕೆಪದವಿಗೆ ಹೋಗಿ ಗರ್ಭಿಣಿಯನ್ನು ಮಂಗಳೂರಿನ ಲೇಡಿಗೋಷನ್‌ಗೆ ಕರೆದೊಯ್ಯುತ್ತಿರುವಾಗಲೇ ದಾರಿ ಮಧ್ಯೆ ಬಂಟ್ವಾಳ ಸಮೀಪ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಆಂಬ್ಯುಲೆನ್ಸ್ ನಲ್ಲಿದ್ದ ಸಿಬ್ಬಂದಿ ರುಬೆನ್ ಕರ್ಜೆಟ್ಟಿ ಸುರಕ್ಷಿತವಾಗಿ ಹೆರಿಗೆ  ಮಾಡಿಸಿದ್ದಾರೆ. ಚಾಲಕ ವೀರೇಶ್ ಸಹಕರಿಸಿದ್ದಾರೆ. ತಾಯಿ ಮಗು ಇಬ್ಬರೂ ಆರೋಗ್ಯದಿಂದ ಇದ್ದು, ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -
spot_img

Latest News

error: Content is protected !!