Thursday, June 4, 2026
Homeಕರಾವಳಿಬೆಳ್ತಂಗಡಿಯ ಗರ್ಡಾಡಿಯಲ್ಲಿ ಮನೆ ಮೇಲೆ ಪುಂಜಾಲಕಟ್ಟೆ ಪೊಲೀಸರ ದಾಳಿ: 42 ಸಾವಿರ ರೂಪಾಯಿ ಮೌಲ್ಯದ ಮದ್ಯ...

ಬೆಳ್ತಂಗಡಿಯ ಗರ್ಡಾಡಿಯಲ್ಲಿ ಮನೆ ಮೇಲೆ ಪುಂಜಾಲಕಟ್ಟೆ ಪೊಲೀಸರ ದಾಳಿ: 42 ಸಾವಿರ ರೂಪಾಯಿ ಮೌಲ್ಯದ ಮದ್ಯ ವಶ

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಗರ್ಡಾಡಿ ಗ್ರಾಮದ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು 42 ಸಾವಿರ ರೂಪಾಯಿ ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ತಾಲ್ಲೂಕಿನ ಗರ್ಡಾಡಿ ಗ್ರಾಮದ ಕಾಣೇಲುವಿನ ಭೋಜ ಪೂಜಾರಿ ಅವರ ನಿವಾಸದ ಮೇಲೆ ದಾಳಿ ನಡೆಸಿದ ಪುಂಜಾಲಕಟ್ಟೆ ಠಾಣಾ ಸಿಬ್ಬಂದಿ  42,000 ರೂ. ಮೌಲ್ಯದ  ಬೇರೆ ಬೇರೆ ರೀತಿಯ 82.53 ಲೀಟರ್ ಮದ್ಯ ಮತ್ತು 58.68 ಲೀಟರ್ ಬಿಯರ್ ಹಾಗೂ 14,125 ರೂ ನಗದನ್ನು ವಶಪಡಿಸಿಕೊಂಡಿದ್ದಾರೆ.

ದಾಳಿ ವೇಳೆ ಆರೋಪಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಕರ್ನಾಟಕ ಅಬಕಾರಿ ಕಾಯ್ದೆ ಸೆಕ್ಷನ್ 32 ಮತ್ತು 34 ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!