Thursday, June 4, 2026
Homeಅಪರಾಧವಿಟ್ಲ: ಅಕ್ರಮ ಮದ್ಯ ಮಾರಾಟ- ಓರ್ವನ ಬಂಧನ

ವಿಟ್ಲ: ಅಕ್ರಮ ಮದ್ಯ ಮಾರಾಟ- ಓರ್ವನ ಬಂಧನ

- Advertisement -
- Advertisement -

ವಿಟ್ಲ: ಮನೆಯೊಂದರ ಪಕ್ಕದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ 24.93 ಲೀಟರ್ ಸಮೇತ ಆರೋಪಿಯನ್ನು ಬಂಧಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ. ಬಂಧಿತ ಆರೋಪಿ ಆನಂದ ಪೂಜಾರಿ ಎನ್ನಲಾಗಿದೆ.

ಜ.15 ರಂದು ವಿಟ್ಲ ಎಸ್.ಐ.ಸಂದೀಪ್ ಕುಮಾರ್ ಶೆಟ್ಟಿಯವರು ಸಿಬ್ಬಂದಿಗಳೊಂದಿಗೆ ರೌಂಡ್ ಕರ್ತವ್ಯದಲ್ಲಿದ್ದ ಸಮಯ ಅಳಿಕೆ ಗ್ರಾಮದ ಕುದ್ದುಪದವು ಎಂಬಲ್ಲಿ ಆನಂದ ಪೂಜಾರಿ ಎಂಬವರ ವಾಸ್ತವ್ಯದ ಮನೆಯ ಪಕ್ಕದ ಕೋಣೆಯಲ್ಲಿ ಅಕ್ರಮವಾಗಿ ಮದ್ಯವನ್ನು ಶೇಖರಿಸಿ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸಂಜೆ ವೇಳೆಗೆ ದಾಳಿ ನಡೆಸಿದ್ದರು.

ದಾಳಿ ಮಾಡಿದ ವೇಳೆ 10,493 ರೂಪಾಯಿ ಅಂದಾಜಿನ 24.93 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!