Friday, June 5, 2026
Homeತಾಜಾ ಸುದ್ದಿಸುಳ್ಯ: ಅಕ್ರಮ ಗೋ ಸಾಗಾಟ- 25ಕ್ಕೂ ಹೆಚ್ಚು ಜಾನುವಾರುಗಳು ವಶಕ್ಕೆ

ಸುಳ್ಯ: ಅಕ್ರಮ ಗೋ ಸಾಗಾಟ- 25ಕ್ಕೂ ಹೆಚ್ಚು ಜಾನುವಾರುಗಳು ವಶಕ್ಕೆ

- Advertisement -
- Advertisement -

ಸುಳ್ಯ: ಮಡಿಕೇರಿಯ ಗಡಿ ಪ್ರದೇಶವಾದ ಸಂಪಾಜೆ ಗೇಟಿನಲ್ಲಿ ವಾಹನ ತಪಾಸಣೆ ವೇಳೆ ಲಾರಿಯೊಂದರಲ್ಲಿ 25 ಕ್ಕೂ ಹೆಚ್ಚು ದನಗಳು ಪತ್ತೆಯಾದ ಘಟನೆ ಜ.25ರಂದು ವರದಿಯಾಗಿದೆ.

ರಾತ್ರಿ ಮಡಿಕೇರಿ ಕಡೆಯಿಂದ ಲಾರಿಯಲ್ಲಿ ದನಗಳನ್ನು ತುಂಬಿಕೊಂಡು ಬರಲಾಗಿತ್ತು. ಸಂಪಾಜೆ ಗೇಟಿನಲ್ಲಿ ಸಿಬ್ಬಂದಿಗಳು ವಿಚಾರಣೆ ನಡೆಸಿದಾಗ ಇದು ದನದ ಫುಡ್ ಸಾಗಾಟ ಎಂದು ಚಾಲಕ ಹೇಳಿದನೆಂದೂ ಗೇಟಿನ ಸಿಬ್ಬಂದಿಗಳಿಗೆ ಅನುಮಾನ ಬಂದು ಲಾರಿಯನ್ನು ಪರಿಶೀಲನೆ ನಡೆಸಿದಾಗ ದನದ ಫುಡ್ ನ ಜತೆಗೆ 25 ಕ್ಕೂ ಹೆಚ್ಚು ದನಗಳು ಕಂಡು ಬಂದಿದೆ.

ಚಾಲಕನನ್ನು ಮತ್ತಷ್ಟು ಪ್ರಶ್ನೆ ಮಾಡಿದಾಗ ಆತ ಹಾಗೂ ಲಾರಿಯಲ್ಲಿದ್ದ ಮತ್ತೊಬ್ಬ ಪರಾರಿಯಾಗಿದ್ದಾರೆ. ಇದೀಗ ಲಾರಿ ಸಂಪಾಜೆ ಗೇಟಿನಲ್ಲಿದ್ದು, ಇದು ಎಲ್ಲಿಂದ ಬರುತ್ತಿತ್ತು ಮತ್ತು ಎಲ್ಲಿಗೆ ಕೊಂಡೊಯ್ಯಲಾಗುತ್ತಿತ್ತು ಎಂಬುದರ ಬಗ್ಗೆ ಇಲಾಖೆಯವರು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!