Thursday, June 4, 2026
Homeಕರಾವಳಿಕಡಬ: ಅಕ್ರಮವಾಗಿ ಕರು ಸಾಗಾಟ: ಕರು ಸಹಿತ ಆರೋಪಿಗಳನ್ನು ಪೋಲೀಸರಿಗೆ ಒಪ್ಪಿಸಿದ ಹಿಂದೂ ಜಾಗರಣಾ ವೇದಿಕೆ...

ಕಡಬ: ಅಕ್ರಮವಾಗಿ ಕರು ಸಾಗಾಟ: ಕರು ಸಹಿತ ಆರೋಪಿಗಳನ್ನು ಪೋಲೀಸರಿಗೆ ಒಪ್ಪಿಸಿದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು

- Advertisement -
- Advertisement -

ಕಡಬ: ಅಕ್ರಮವಾಗಿ ಕರುವನ್ನು ಟೆಂಪೋದಲ್ಲಿ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಹಿಡಿದು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಕರು ಸಹಿತ  ಪೋಲೀಸರಿಗೆ ಒಪ್ಪಿಸಿದ ಘಟನೆ ತೆಂಕಬೆಳ್ಳೂರು ಎಂಬಲ್ಲಿ ನಡೆದಿದೆ.

ಕಲ್ಲಗುಡ್ಡೆಯಿಂದ ಅಮ್ಮುಂಜೆಗೆ ಸಾಗಿಸುತ್ತಿದ್ದ ವೇಳೆ ತೆಂಕಬೆಳ್ಳೂರು ಎಂಬಲ್ಲಿ ಕಾರ್ಯಕರ್ತರು ಅಡ್ಡ ಹಾಕಿ ಇಬ್ಬರು ಆರೋಪಿಗಳಾದ ಗೋಪಾಲ್ ಹಾಗೂ ರಫೀಜ್ ಎಂಬವರನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ.

ಇನ್ನು ವಿಟ್ಲದಲ್ಲಿಯೂ ದಾಳಿ ನಡೆಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಕರು ಸಹಿತ ಆರೋಪಿಗಳನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ. ಮಹಮ್ಮದ್ ಹಾಗೂ ಮಸೂದ್ ಎಂಬ ಇಬ್ಬರು ಆರೋಪಿಗಳು ಕರುವನ್ನು ಸಾಗಿಸುತ್ತಿದ್ದ ವೇಳೆ ಕನ್ಯಾನ ಎಂಬಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಬಳಿಕ ಪೋಲೀಸರಿಗೆ ಒಪ್ಪಿಸಿದ್ದಾರೆ

- Advertisement -

Latest News

error: Content is protected !!