Sunday, June 7, 2026
Homeಕರಾವಳಿಮೂಡಿಗೆರೆ: ಇನೋವಾ ವಾಹನದಲ್ಲಿ ಅಕ್ರಮ ದನ ಸಾಗಾಟ;ಬಂಟ್ವಾಳ ಮೂಲದ ಮೂವರ ಬಂಧನ!

ಮೂಡಿಗೆರೆ: ಇನೋವಾ ವಾಹನದಲ್ಲಿ ಅಕ್ರಮ ದನ ಸಾಗಾಟ;ಬಂಟ್ವಾಳ ಮೂಲದ ಮೂವರ ಬಂಧನ!

- Advertisement -
- Advertisement -

ಚಿಕ್ಕಮಗಳೂರು : ಇನ್ನೋವಾ ವಾಹನದ ಹಿಂಬಾಗದ ಶೀಟ್ ಅನ್ನು ಮಡಚಿ ಅದರೊಳಗೆ ಒಂದು ಹೋರಿ ಕರುವನ್ನು ತುಂಬಿಕೊಂಡು ಹೋಗುತ್ತಿದ್ದ ಘಟನೆ ಇಂದು ಬೆಳಗ್ಗಿನ ಜಾವ 4 ಗಂಟೆಗೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣಾ ಪಿಎಸ್ಐ ರವಿ ಜಿ. ಎ ಮತ್ತು ಸಿಬ್ಬಂದಿಗಳೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯದಲ್ಲಿ, ಬಿಜುವಳಿ ಗ್ರಾಮದ ಸ್ಮಶಾನದ ಬಳಿ KA-04-MF-4998 ನಂಬರಿನ ಇನ್ನೋವಾ ಕಾರಿನ ಹಿಂಬಾಗದ ಶೀಟ್ ಅನ್ನು ಮಡಚಿ ಅದರೊಳಗೆ ಒಂದು ಹೋರಿ ಕರುವನ್ನು ತುಂಬಿಕೊಂಡಿದ್ದು ಬೆಳಕಿಗೆ ಬಂದಿದೆ.ಈ ಹೋರಿ ಕರುವನ್ನು ಮಾಂಸ ಮಾಡಲು ಕಳ್ಳತನ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿರುವುದರಿಂದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಾದ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ನಿಜಾಮುದ್ದೀನ್ (23) ,ಆಶಿಕ್ ಪಾಷಾ(23) , ಮಹಮ್ಮದ್ ಮಸೂರ(20) ರವರನ್ನು ಸದ್ಯ ಬಂಧಿಸಲಾಗಿದ್ದು, ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!