Sunday, May 5, 2024
Homeತಾಜಾ ಸುದ್ದಿಮಂಗಳೂರು: ರಸ್ತೆಗಳಲ್ಲಿ ಹೊಂಡ ಗುಂಡಿಗಳಿದ್ದಲ್ಲಿ ಮಾಹಿತಿ ನೀಡಿ: ಮಹಾನಗರ ಪಾಲಿಕೆ ಪ್ರಕಟಣೆ

ಮಂಗಳೂರು: ರಸ್ತೆಗಳಲ್ಲಿ ಹೊಂಡ ಗುಂಡಿಗಳಿದ್ದಲ್ಲಿ ಮಾಹಿತಿ ನೀಡಿ: ಮಹಾನಗರ ಪಾಲಿಕೆ ಪ್ರಕಟಣೆ

spot_img
- Advertisement -
- Advertisement -

ಮಂಗಳೂರು : ಹೊಂಡ-ಗುಂಡಿಗಳ ಹಾಗೂ ಅನಧಿಕೃತ ಅಗೆತಗಳ ಬಗ್ಗೆ ದೂರುಗಳಿದ್ದಲ್ಲಿ ವಾಟ್ಸ್‌ ಆಪ್‌ ಸಂಖ್ಯೆ 9449007722 ಹಾಗೂ ಮಹಾನಗರಪಾಲಿಕೆಯ ಸಹಾಯವಾಣಿ ಸಂಖ್ಯೆ 0824-2220306ಗೆ ತಿಳಿಸಬಹುದಾಗಿದೆ. ಅಲ್ಲದೇ ವಾರ್ಡ್‌ ಹಂತದಲ್ಲಿ ಸಂಬಂಧಪಟ್ಟ ವಾರ್ಡ್‌ ಇಂಜಿನಿಯರ್‌ ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಾ ನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 2022ರ ಮಳೆಗಾಲದಲ್ಲಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ಸಾಮಾನ್ಯ ಮಳೆಗಿಂತ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ಉಂಟಾಗುವ ಹೊಂಡ-ಗುಂಡಿಗಳನ್ನು ಕಾಲಕಾಲಕ್ಕೆ ಶೀಘ್ರ ದುರಸ್ಥಿಗೆ ಕ್ರಮ ವಹಿಸಲಾಗುತ್ತಿರುತ್ತದೆ. ಅಲ್ಲದೆ, ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 24X7 ನೀರು ಸರಬರಾಜು ಯೋಜನೆಯ ಕಾಮಗಾರಿಗಳು, ಗೈಲ್ ಗ್ಯಾಸ್ ಕಂಪೆನಿಯಿಂದ ಗ್ಯಾಸ್ ಲೈನ್ ಅಳವಡಿಕೆ ಕಾಮಗಾರಿಗಳು ನಡೆಯುತ್ತಿರುತ್ತದೆ. ಈ ಕಾಮಗಾರಿಗಳ ಭಾಗದ ರಸ್ತೆಗಳ ಮರು ನಿರ್ಮಾಣವನ್ನು ಸಂಬಂಧಿಸಿದ ಇಲಾಖೆಯವರು ಕಾಲಕಾಲಕ್ಕೆ ನಿರ್ವಹಿಸುತ್ತಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -
spot_img

Latest News

error: Content is protected !!