Friday, June 5, 2026
Homeಕರಾವಳಿಇದಪ್ಪಾ ಕರ್ತವ್ಯ ಪ್ರಜ್ಞೆ ಎಂದರೆ..; ಕೇರಳದ ಕ್ಯಾಲಿಕಟ್ ನಿಂದ ಬೈಕ್ ನಲ್ಲಿ ಬಂದು ಕಡಬದಲ್ಲಿ...

ಇದಪ್ಪಾ ಕರ್ತವ್ಯ ಪ್ರಜ್ಞೆ ಎಂದರೆ..; ಕೇರಳದ ಕ್ಯಾಲಿಕಟ್ ನಿಂದ ಬೈಕ್ ನಲ್ಲಿ ಬಂದು ಕಡಬದಲ್ಲಿ ತಮ್ಮ ಹಕ್ಕು ಚಲಾಯಿಸಿದ ದಂಪತಿ

- Advertisement -
- Advertisement -

ಕಡಬ: ಕಾಲು ಬುಡದಲ್ಲಿ ಮತಗಟ್ಟೆಯಿದ್ದರೂ ಕೆಲವರು ಅಯ್ಯೋ ಯಾರು ಗುರು ಹೋಗ್ತಾರೆ ಅಂತಾ ಮತದಾನ ಮಾಡೋದಕ್ಕೆ ಹಿಂದೇಟು ಹಾಕ್ತಾರೆ ಆದ್ರೆ ಇಲ್ಲೊಂದು ದಂಪತಿ ಮತದಾನ ಮಾಡದೇ ನಿರ್ಲಕ್ಷ್ಯ ವಹಿಸುವವರಿಗೆ ಮಾದರಿಯಾಗಿದ್ದಾರೆ.ಕ್ಯಾಲಿಕಟ್ ನಿಂದ ದ್ವಿಚಕ್ರವಾಹನದಲ್ಲೇ ಕಡಬಕ್ಕೆ 270 ,ಕಿ.ಮಿ ಕ್ರಮಿಸಿ ಬಂದು ದಂಪತಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕೋರಿಯಾರ್ ಸಮೀಪ ನಿವಾಸಿ, ಪ್ರಸ್ತುತ ಕೇರಳದ ಕ್ಯಾಲಿಕಟ್ ನಲ್ಲಿ ಉದ್ಯೋಗ ದಲ್ಲಿರುವ ಗೋಪಾಲಕೃಷ್ಣ ಮತ್ತು ಧನ್ಯ ದಂಪತಿ ಮತದಾನಕ್ಕಾಗಿ ಅಷ್ಟು ದೂರದಿಂದ ಹುಟ್ಟೂರಿಗೆ ಆಗಮಿಸಿದ್ದಾರೆ.

ದಂಪತಿ ಕೋಡಿಂಬಾಳ ಗ್ರಾಮದ ಮಡ್ಯಡ್ಕ 95 ನಂ ಬೂತ್‌ನಲ್ಲಿ ಮತದಾನ ಮಾಡಿದ್ದಾರೆ.ಕ್ಯಾಲಿಕೆಟ್ ನಿಂದ ಮುಂಜಾನೆ
5:00 ಗಂಟೆಗೆ ಹೊರಟು ಮಧ್ಯಾಹ್ನ 3:35ಕ್ಕೆ ಕೋಡಿಂಬಾಳ ಮತದಾನ ಕೇಂದ್ರ ತಲುಪಿರುವುದಾಗಿ ದಂಪತಿ ತಿಳಿಸಿದ್ದಾರೆ. ದಂಪತಿ ಕರ್ತವ್ಯ ಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Latest News

error: Content is protected !!