Friday, June 5, 2026
Homeಕರಾವಳಿವೆನ್ ಲಾಕ್ ಆಸ್ಪತ್ರೆಯಲ್ಲಿ 32 ಬೆಡ್ ಗಳ ಐಸಿಯು ಉದ್ಘಾಟನೆ

ವೆನ್ ಲಾಕ್ ಆಸ್ಪತ್ರೆಯಲ್ಲಿ 32 ಬೆಡ್ ಗಳ ಐಸಿಯು ಉದ್ಘಾಟನೆ

- Advertisement -
- Advertisement -

ಮಂಗಳೂರು: ವೆನ್ ಲಾಕ್ ಆಸ್ಪತ್ರೆಯಲ್ಲಿ 32 ಬೆಡ್ ಗಳ ಮೆಡಿಸಿನ್ ವಿಭಾಗದ ತೀವ್ರ ನಿಗಾ ಘಟಕ ಉದ್ಘಾಟನೆಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಹೊಸ ಘಟಕ ಉದ್ಘಾಟಿಸಿದ್ದಾರೆ‌.

ಎಸ್ ಡಿಆರ್ ಎಫ್ ಅನುದಾನದಲ್ಲಿ ಐಸಿಯು ಘಟಕ ನಿರ್ಮಾಣಗೊಂಡಿದೆ. ವೆಂಟಿಲೇಟರ್, ಮಾನಿಟರ್ ಸೇರಿ ಅಗತ್ಯ ವೈದ್ಯಕೀಯ ಉಪಕರಣಗಳಿರುವ ಘಟಕ ಇದಾಗಿದ್ದು, ಮಕ್ಕಳ ಮತ್ತು ವಯಸ್ಕರ ಚಿಕಿತ್ಸೆಗೆ ಬಳಕೆಯಾಗಲಿದೆ.

ಕಾರ್ಯಕ್ರಮದಲ್ಲಿ ಸಚಿವರಾದ ಡಾ. ಸುಧಾಕರ, ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಸಂಸದ ನಳೀನ್ ಕುಮಾರ್ ಕಟೀಲ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಉಪಸ್ಥಿತರಿದ್ದರು.

- Advertisement -

Latest News

error: Content is protected !!