Thursday, June 25, 2026
Homeತಾಜಾ ಸುದ್ದಿಕಾಲೇಜು ದಿನಗಳಲ್ಲಿ ಧರ್ಮಸ್ಥಳ ಪಾರ್ಕ್ ನಲ್ಲಿ ನಾನ್ ವೆಜ್ ತಿಂದಿದ್ದೆ; ಬಿಗ್ ಬಾಸ್ ಸೀಸನ್ 12...

ಕಾಲೇಜು ದಿನಗಳಲ್ಲಿ ಧರ್ಮಸ್ಥಳ ಪಾರ್ಕ್ ನಲ್ಲಿ ನಾನ್ ವೆಜ್ ತಿಂದಿದ್ದೆ; ಬಿಗ್ ಬಾಸ್ ಸೀಸನ್ 12 ಸ್ಪರ್ಧಿ ಡಾಗ್ ಸತೀಶ್ ವಿವಾದಾತ್ಮಕ ಹೇಳಿಕೆ

- Advertisement -
- Advertisement -

ಬೆಂಗಳೂರು; ಕಾಲೇಜು ದಿನಗಳಲ್ಲಿ ಧರ್ಮಸ್ಥಳ ಪಾರ್ಕ್ ನಲ್ಲಿ ನಾನ್ ವೆಜ್ ತಿಂದಿದ್ದೆ ಎಂದು ಬಿಗ್ ಬಾಸ್ ಸೀಸನ್ 12 ಸ್ಪರ್ಧಿ ಡಾಗ್ ಸತೀಶ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಡಾಲಿ ಧನಂಜಯ್ ಮಾಂಸಾಹಾರ ಸೇವನೆ ಕುರಿತು ಹೇಳಿಕೆ ನೀಡಿದ ಡಾಗ್ ಸತೀಶ್, ಯಾರು, ಯಾವ ದಿನ ಬೇಕಾದರು ಮಾಂಸಾಹಾರ ತಿನ್ನಬಹುದು. ನಾನು ವರ್ಷದ 365 ದಿನ ನಾನ್ ವೆಜ್ ತಿನ್ನುತ್ತೇನೆ. ಸೋಮವಾರನೂ ತಿನ್ನುತ್ತೇನೆ, ಇತರ ದಿನವೂ ತಿನ್ನುತ್ತೇನೆ. ಗಣೇಶ ಹಬ್ಬ, ಗೌರಿ ಹಬ್ಬ ಸೇರಿದಂತೆ ಸಸ್ಯಾಹಾರ ಸೇವನೆ ಹಬ್ಬಗಳ ದಿನದಲ್ಲೂ ನಾನು ಮಾಂಸಾಹಾರ ತಿನ್ನುತ್ತೇನೆ ಎಂದು ಡಾಗ್ ಸತೀಶ್ ಹೇಳಿದ್ದಾರೆ. ಖಾಸಗಿ ವಾಹಿನಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ನಾನು ಕಾಲೇಜು ದಿನಗಳಲ್ಲಿರುವಾಗ ಗೆಳೆಯರ ಒತ್ತಾಯಕ್ಕೆ ಧರ್ಮಸ್ಥಳಕ್ಕೆ ತೆರಳಿದ್ದೆ. ನಾನು ದೇವರು ದಿಂಡ್ರೂ ನಂಬೋದಿಲ್ಲ. ಆದರೆ ಗೆಳೆಯರ ಜೊತೆಗೆ ಧರ್ಮಸ್ಥಳಕ್ಕೆ ಹೋದಾಗ, ಧರ್ಮಸ್ಥಳದ ಪಾರ್ಕ್‌ನಲ್ಲಿ ಬಿರಿಯಾನಿ ಕಬಾಬ್ ತಿಂದಿದ್ದೇನೆ ಎಂದಿದ್ದಾರೆ.

ಡಾಗ್ ಸತೀಶ್ ವಿರುದ್ಧ ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ಡಾಗ್ ಸತೀಶ್ ದೇವರನ್ನು ನಂಬಬೇಕು ಎಂದು ಯಾರು ಹೇಳಿಲ್ಲ, ಯಾರೂ ಒತ್ತಾಯಿಸಿಲ್ಲ. ಆದರೆ ದೇವರನ್ನು ನಂಬುವ ಭಕ್ತರ ನಂಬಿಕೆಗೆ ಘಾಸಿ ಮಾಡಿದ್ದೀರಿ. ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸುವ ಪ್ರಯತ್ನ ಮಾಡಿದ್ದೀರಿ. ಇದಕ್ಕೆ ತಕ್ಕ ಪ್ರತಿಫಲ ಸಿಗಲಿದೆ ಎಂದು ಭಕ್ತರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ಡಾಗ್ ಸತೀಶ ದೇವರನ್ನು ನಂಬಲ್ಲ, ಜನ ಡಾಗ್ ಸತೀಶನ ನಂಬಲ್ಲ ಇಷ್ಟೇ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.

- Advertisement -

Latest News

error: Content is protected !!