Saturday, June 6, 2026
Homeತಾಜಾ ಸುದ್ದಿಹಣಕ್ಕಾಗಿ ಪತ್ನಿಯ ಬೆತ್ತಲೆ ವಿಡಿಯೋವನ್ನು ಪೋರ್ನ್ ವೆಬ್ಸೈ್ಟ್ ಗಳಲ್ಲಿ ಅಪ್ಲೋಡ್ ಮಾಡಿದ ಪಾಪಿ ಪತಿ

ಹಣಕ್ಕಾಗಿ ಪತ್ನಿಯ ಬೆತ್ತಲೆ ವಿಡಿಯೋವನ್ನು ಪೋರ್ನ್ ವೆಬ್ಸೈ್ಟ್ ಗಳಲ್ಲಿ ಅಪ್ಲೋಡ್ ಮಾಡಿದ ಪಾಪಿ ಪತಿ

- Advertisement -
- Advertisement -

ಹೈದರಾಬಾದ್: ಹಣಕ್ಕಾಗಿ ಮನುಷ್ಯ ಎಷ್ಟು ನೀಚ ಮಟ್ಟಕ್ಕೆ ಇಳಿಯುತ್ತಾನೆ ಅಂತಾ ಹೇಳೋದಕ್ಕೆ ಸಾಧ್ಯಾನೇ ಇಲ್ಲ. ಇಲ್ಲೊಬ್ಬ ಪಾಪಿ ಪತಿ ಹಣದಾಸೆಗಾಗಿ ತನ್ನ ಪತ್ನಿಯ ನಗ್ನ ವೀಡಿಯೋಗಳನ್ನೇ ಪೋರ್ನ್ ವೆಬ್‍ಸೈಟ್ ಗಳಲ್ಲಿ ಅಪ್ಲೋಡ್ ಮಾಡಿದ್ದಾನೆ.

ಅಂದ್ಹಾಗೆ ಈ ಘಟನೆ ನಡೆದಿರೋದು ಆಂಧ್ರಪ್ರದೇಶದ ಗುಂಟೂರಿನಲ್ಲಿ. ಸಂತ್ರಸ್ತ ಮಹಿಳೆ ಯತಿ ಅಗ್ರಹಾರ ನಿವಾಸಿಯಾಗಿದ್ದು, ತನ್ನ ನಗ್ನ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋದು ಗಮನಕ್ಕೆ ಬಂದಿದೆ. ಕೂಡಲೇ ಮಹಿಳೆ ಪತ್ನಂ ಬಜಾರ ಏರಿಯಾದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಪತಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧನ ಬಳಿಕ ಆರೋಪಿ ಪತ್ನಿಗೆ ತಿಳಿಯದಂತೆ ವಿಡಿಯೋ ಚಿತ್ರೀಕರಿಸಿ ಕೆಲ ವೆಬ್‍ಸೈಟ್ ಗಳಿಗೆ ಹಣ ಪಡೆಯುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಜೊತೆಗೆ ಹಲವು ಬಾರಿ ಪತ್ನಿ ಜೊತೆಗೆ ತಾನು ಕಳೆದ ಸಮಯವನ್ನು ಲೈವ್ ಸ್ಟ್ರೀಮಿಂಗ್ ಆ್ಯಪ್ ಮೂಲಕ ಲೈವ್ ಮಾಡಿರುವ ಆಘಾತಕಾರಿ ವಿಷಯ ಬಾಯಿ ಬಿಟ್ಟಿದ್ದಾನೆ.

- Advertisement -

Latest News

error: Content is protected !!