Wednesday, May 8, 2024
HomeWorldಜೂನ್ 21 ರಿಂದ 18 ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನ್​_ಪ್ರಧಾನಿ ಮೋದಿ

ಜೂನ್ 21 ರಿಂದ 18 ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನ್​_ಪ್ರಧಾನಿ ಮೋದಿ

spot_img
- Advertisement -
- Advertisement -

ನವದೆಹಲಿ: ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ.. ಜೂನ್ 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನ್​ ಘೋಷಿಸಿದರು. ಅಂತಾರಾಷ್ಟ್ರೀಯ ಯೋಗ ದಿನವಾದ ಜೂನ್ 21 ರಿಂದ ಇದು ಜಾರಿಯಾಗಲಿದೆ ಎಂದರು.

ಮೋದಿ ಭಾಷಣದ ಮುಖ್ಯಾಂಶಗಳು..

. ಕೊರೊನಾದ ಎರಡನೇ ಅಲೆಯೊಂದಿಗೆ ನಮ್ಮ ಹೋರಾಟ ಮುಂದುವರೆಯುತ್ತಿದೆ. ಈ ಹೋರಾಟದಲ್ಲಿ ನಾವು ನಮ್ಮ ಸಂಬಂಧಿಕರು, ಪರಿಚಿತರನ್ನು ಕಳೆದುಕೊಂಡಿದ್ದೇವೆ.

. ಕಳೆದ ಹಲವು ವರ್ಷಗಳಲ್ಲಿ ಈ ರೀತಿಯ ಮಹಾಮಾರಿಯನ್ನು ನೋಡಿರಲಿಲ್ಲ.

. ಈಗ ದೇಶದಾದ್ಯಂತ ವ್ಯಾಕ್ಸಿನ್​ಗೆ ಭಾರೀ ಬೇಡಿಕೆ ಇದೆ. ವ್ಯಾಕ್ಸಿನ್ ತಯಾರಿಸುತ್ತಿರುವ ದೇಶಗಳು ತುಂಬಾ ಕಡಿಮೆ ಇವೆ.

. ದೇಶದಲ್ಲಿ ನಮಗೆ ಕಡಿಮೆ ಸಮಯದಲ್ಲಿ ವ್ಯಾಕ್ಸಿನ್ ತಯಾರಿಸುವ ವಿಶ್ವಾಸವಿತ್ತು.

. ಕಳೆದ ವರ್ಷ ಏಪ್ರಿಲ್​ನಲ್ಲಿ ಕೆಲವು ಸಾವಿರ ಕೇಸ್ ಇದ್ದಾಗಲೇ ವ್ಯಾಕ್ಸಿನ್ ಟಾಸ್ಕ್ ರಚಿಸಲಾಯ್ತು.

. ಎಲ್ಲೆಲ್ಲಿ ಆಕ್ಸಿಜನ್ ಸಿಗ್ತಿತ್ತೋ ಅದನ್ನ ಹುಡುಕಿ ತರಲಾಯ್ತು. ಜೊತೆಗೆ ಆಕ್ಸಿಜನ್ ತಯಾರಿಕೆಯನ್ನೂ ಅಭಿವೃದ್ಧಿಪಡಿಸಿಕೊಳ್ಳಲಾಯ್ತು.

. ಮಿಷನ್ ಇಂಧ್ರಧನುಷ್​ ಲಾಂಚ್ ಮಾಡಲಾಯ್ತು. ಈ ಮೂಲಕ ದೇಶದಲ್ಲಿ ಯಾರ್ಯಾರಿಗೆ ವ್ಯಾಕ್ಸಿನ್ ನೀಡಬೇಕಿತ್ತು ಎಲ್ಲರಿಗೂ ವ್ಯಾಕ್ಸಿನ್ ನೀಡಲು ಪ್ರಾರಂಭಿಸಿದ್ವಿ.

. ಎರಡನೇ ಅಲೆಗೂ ಮುನ್ನ ಆರೋಗ್ಯ ಸಿಬ್ಬಂದಿಗೆ ವ್ಯಾಕ್ಸಿನ್ ನೀಡದಿದ್ದರೆ ಏನಾಗುತ್ತಿತ್ತು..?

- Advertisement -
spot_img

Latest News

error: Content is protected !!