Friday, May 10, 2024
Homeಕರಾವಳಿಕರಿಮಣಿ ಮಾಲೀಕ ನೀನಲ್ಲ ಹಾಡು ವೈರಲ್ ಮಾಡಿದವರು ಯಾರು ? ಹುಡುಕುತ್ತಿದ್ದವರಿಗೆ ಕೊನೆಗೂ ಸಿಕ್ತು ಉತ್ತರ

ಕರಿಮಣಿ ಮಾಲೀಕ ನೀನಲ್ಲ ಹಾಡು ವೈರಲ್ ಮಾಡಿದವರು ಯಾರು ? ಹುಡುಕುತ್ತಿದ್ದವರಿಗೆ ಕೊನೆಗೂ ಸಿಕ್ತು ಉತ್ತರ

spot_img
- Advertisement -
- Advertisement -

ನ್ಯೂಸ್ ಡೆಸ್ಕ್; ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕರಿಮಣಿ ಮಾಲೀಕ ನೀನಲ್ಲ ಸಾಂಗ್ ಹಾವಳಿ ತಡೆಯೋಕೆ ಆಗ್ತಿಲ್ಲ. ಕರಿಮಣಿ ಮಾಲೀಕ ನಾನಲ್ಲ ಸಾಂಗ್ ನ ರೀಲ್ಸ್ ನೋಡಿ ಜನ ಸಾಕಪ್ಪ ಸಾಕು ಅಂತಾ ಓಡಿ ಹೋಗುವ ರೇಂಜಿಗೆ ಅದರ ಹವಾ ಜೋರಾಗಿದೆ. ಕೂತಲ್ಲಿ ನಿಂತಲ್ಲಿ ಇದೇ ಹಾಡು ಕೇಳಿ ಕೇಳಿ ಸುಸ್ತಾದ ಜನ ಈ ಹಾಡು ವೈರಲ್ ಮಾಡಿದ್ದು ಯಾರು ಅಂತ ಹುಡುಕೋದಕ್ಕೆ ಶುರು ಮಾಡಿದ್ದಾರೆ. ಹೀಗಿರುವಾಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಅಂದ್ಹಾಗೆ ಈ ಹಾಡು ಇಷ್ಟರ ಮಟ್ಟಿಗೆ ಸದ್ದು ಮಾಡಲು ಕಾರಣ ಉತ್ತರ ಕರ್ನಾಟಕದ ಕನಕ ಎಂಬ ಯುವಕ. ಕನಕ ಓ ನಲ್ಲ, ನೀ ನಲ್ಲ, ಕರಿಮಣಿ ಮಾಲೀಕ ನೀನಲ್ಲ.. ಕರಿಮಣಿ ಮಾಲೀಕ ನೀ ನಲ್ಲ..’ ಎಂಬ ಸಾಲುಗಳನ್ನು ಬಳಸಿ, ರೀಲ್ಸ್ ಮಾಡಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಯ್ತು. ಬಳಿಕ ಇದು ಟಪ್ಪಾಂಗುಚ್ಚಿ ವರ್ಷನ್‌ಗೆ ಬದಲಾಯ್ತು. ಈಗ ಇದು ಭಾರೀ ಸದ್ದು ಮಾಡುತ್ತಿದೆ.

1999 ರಲ್ಲಿ ತೆರೆಕಂಡ  ‘ಉಪೇಂದ್ರ’ ಸಿನಿಮಾದ ಈ ಹಾಡು 25 ವರ್ಷಗಳ ನಂತರ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಲು ಶುರುವಾಗಿದೆ. ಅಲ್ಲದೇ ಈ ಹಾಡು ವೈರಲ್ ಆಗುತ್ತಿದ್ದಂತೆ ಇದರ ಬಗ್ಗೆ ಟ್ರೋಲ್ ಹಾಗೂ ಬೇರೆ ಬೇರೆ ವೀಡಿಯೋಗಳು ವೈರಲ್ ಆಗುತ್ತಿದೆ. ಅದರಲ್ಲೂ ವಿಕ್ಕಿಪೀಡಿಯಾದ ವಿಕ್ಕಿ ಆಂಡ್ ಟೀಮ್ ಮಾಡಿರುವ ವೀಡಿಯೋವಂತೂ ಎಲ್ಲರ ಮೊಬೈಲ್ ನಲ್ಲಿ ಸ್ಟೇಟಸ್ ರೂಪದಲ್ಲಿ ರಾರಾಜಿಸುತ್ತಿದೆ. ಅಲ್ಲದೇ ಖ್ಯಾತ ಗಾಯಕರು ಈ ಹಾಡನ್ನು ಹಾಡಿ ಗೋಯಿಂಗ್ ವಿತ್ ಟ್ರೆಂಟ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ದಾರೆ.

- Advertisement -
spot_img

Latest News

error: Content is protected !!