Wednesday, May 8, 2024
Homeಕರಾವಳಿಉಡುಪಿಉಡುಪಿ; ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿಯ ನಗದು, ಚಿನ್ನಾಭರಣ ಕಳವುಗೈದ ಕಳ್ಳರು

ಉಡುಪಿ; ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿಯ ನಗದು, ಚಿನ್ನಾಭರಣ ಕಳವುಗೈದ ಕಳ್ಳರು

spot_img
- Advertisement -
- Advertisement -

ಉಡುಪಿ: ಕಳ್ಳರು ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿಯ ನಗದು, ಚಿನ್ನಾಭರಣ ಕಳವುಗೈದ ಘಟನೆ ಶಿರೂರು ಮಾರ್ಕೆಟ್ ಬಳಿಯ ಮನೆಯೊಂದರಲ್ಲಿ ನಡೆದಿದೆ.

ಶಿರೂರು ಮಾರ್ಕೆಟ್ ಬಳಿ ಹಾರ್ಡ್‌ವೇರ್ ಉದ್ಯಮ ನಡೆಸುತ್ತಿರುವ ಅಜೀಮ್ ಎಂಬವರು ರಾತ್ರಿ ಊಟ ಮಾಡಿ ಮಸೀದಿಗೆ ಪ್ರಾರ್ಥನೆಗೆ ತೆರಳಿ ವಾಪಾಸ್ಸು ಬಂದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.ಮನೆಗೆ ನುಗ್ಗಿದ ಕಳ್ಳರು, ಒಳಗೆ ಇದ್ದ 18 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 12 ಲಕ್ಷ ನಗದು ಕಳವು ಮಾಡಿದ್ದಾರೆ.

ಕಳೆದ ವಾರ ನಿರಂತರ ರಜೆ ಇರುವ ಕಾರಣ ವ್ಯವಹಾರದ ಹಣವನ್ನು ಬ್ಯಾಂಕಿಗೆ ಹಾಕಲಾಗದೆ ಮನೆಯಲ್ಲಿಟ್ಟಿದ್ದರು. ಈ ಕುರಿತು ಮಾಹಿತಿ ಇರುವವರೆ ಕಳ್ಳತನ ನಡೆಸಿರುವ ಸಾಧ್ಯತೆ ಕೂಡ ಇದೆಯೆಂಬ ಶಂಕೆ ವ್ಯಕ್ತಪಡಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!