Wednesday, June 3, 2026
Homeಕರಾವಳಿಕೊಣಾಜೆಯಲ್ಲಿ ಮನೆಗೆ ನುಗ್ಗಿದ ಕಳ್ಳರು: 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, 5 ಲಕ್ಷ ನಗದು...

ಕೊಣಾಜೆಯಲ್ಲಿ ಮನೆಗೆ ನುಗ್ಗಿದ ಕಳ್ಳರು: 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, 5 ಲಕ್ಷ ನಗದು ಕಳವು

- Advertisement -
- Advertisement -

ಮಂಗಳೂರು: ಮನೆಯೊಂದಕ್ಕೆ ನುಗ್ಗಿದ ಕಳ್ಳರು 700ಗ್ರಾಂ ಗೂ ಅಧಿಕ ಚಿನ್ನ ಹಾಗೂ 5 ಲಕ್ಷ ರೂಪಾಯಿ ನಗದು ದೋಚಿರುವ ಘಟನೆ ಮಂಗಳೂರಿನ ಕೊಣಾಜೆಯ ಕೋಡಿಜಾಲ್ ನಲ್ಲಿ ನಡೆದಿದೆ.

ಕೋಡಿಜಾಲ್ ನಿವಾಸಿ ಅಬೀಬ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು ಮನೆಯ ಬೆಡ್ ರೂಂನಲ್ಲಿದ್ದ ಕಪಾಟಿನಿಂದ ಚಿನ್ನಾಭರಣ ಕಳವು ಮಾಡಿದ್ದಾರೆ.

ಅಬೀದ್ ಅಕ್ಕನ‌ ಮಗಳ‌ ಮದುವೆ ವಾರದ ಹಿಂದೆ ನಡೆದಿತ್ತು. ಹಾಗಾಗಿ ಬ್ಯಾಂಕ್ ನ ಲಾಕರ್ ನಲ್ಲಿಟ್ಟಿದ್ದ ಬಂಗಾರವನ್ನು ಮನೆಗೆ ತಂದಿದ್ದರು. ಅಬೀದ್ ಅವರು ಅಡಿಕೆ ವ್ಯಾಪಾರಿಯಾಗಿದ್ದು ಅಡಕೆ ವ್ಯವಹಾರದ ಹಣವನ್ನೂ ನಿನ್ನೆ ಮನೆಗೆ ತಂದಿದ್ದರು. ಇದಲ್ಲೆವನ್ನೂ ಗಮನಿಸಿದ್ದ ಕಳ್ಳರೇ ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.

ಕೊಣಾಜೆ ಪೊಲೀಸರು ಸ್ಥಳದಲ್ಲಿ ಇದ್ದು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಲಿದ್ದಾರೆ. ಕಳವಾದ ಚಿನ್ನಾಭರಣಗಳ ಮೌಲ್ಯ 20 ಲಕ್ಷಕ್ಕೂ ಅಧಿಕ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

- Advertisement -

Latest News

error: Content is protected !!