Sunday, June 7, 2026
Homeಕರಾವಳಿಬೆಳ್ತಂಗಡಿ: ಭಾರೀ ಮಳೆಗೆ ಉಜಿರೆ ಮೈಕಾಡಿಯಲ್ಲಿ ಕುಸಿದು ಬಿದ್ದ ಮನೆ!

ಬೆಳ್ತಂಗಡಿ: ಭಾರೀ ಮಳೆಗೆ ಉಜಿರೆ ಮೈಕಾಡಿಯಲ್ಲಿ ಕುಸಿದು ಬಿದ್ದ ಮನೆ!

- Advertisement -
- Advertisement -

ಬೆಳ್ತಂಗಡಿ : ಇಂದು ಸುರಿದ ಗಾಳಿ ಸಹಿತ ಭಾರೀ ಮಳೆಗೆ ಮನೆ ಕುಸಿದು ಬಿದ್ದ ಘಟನೆ ಉಜಿರೆ ಗ್ರಾಮದ ಪೆರ್ಲ ಮೈಕಾಡಿ ಎಂಬಲ್ಲಿ ನಡೆದಿದೆ. ಬೇಬಿ, ಗೋಪಾಲ ಪೂಜಾರಿಯವರ ಮನೆಗೆ ಕುಸಿದಿದೆ.

ಮನೆಯ ಹಿಂಭಾಗದ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದು ಪೀಠೋಪಕರಣಗಳಿಗೆ ಹಾನಿಯಾಗಿದ್ದು ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನು ಘಟನಾ ಸ್ಥಳಕ್ಕೆ ಗ್ರಾ.ಪಂ ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಕಾರ್ಯದರ್ಶಿ ಜಯಂತ್ ಯು.ಬಿ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

- Advertisement -

Latest News

error: Content is protected !!