Wednesday, June 24, 2026
Homeಕರಾವಳಿಉಡುಪಿಉಡುಪಿ: ಹಾಸ್ಟೆಲ್ ವಾರ್ಡನ್ ದಿಢೀರ್ ನಾಪತ್ತೆ

ಉಡುಪಿ: ಹಾಸ್ಟೆಲ್ ವಾರ್ಡನ್ ದಿಢೀರ್ ನಾಪತ್ತೆ

- Advertisement -
- Advertisement -

ಉಡುಪಿ: ಹಾಸ್ಟೆಲ್ ವಾರ್ಡನ್ ದಿಢೀರ್ ನಾಪತ್ತೆಯಾಗಿರುವ ಘಟನೆ ಉಡುಪಿ ತಾಲೂಕು 76 ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆಯಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ. ಈ ವಿದ್ಯಾರ್ಥಿ ನಿಲಯದಲ್ಲಿ ವಾರ್ಡನ್ ಆಗಿ ಕೆಲಸ ನಿರ್ವಹಿಸುತ್ತಿದ್ದ, ವಿದ್ಯಾರ್ಥಿ ನಿಲಯದ ಒಂದನೇ ಮಹಡಿಯಲ್ಲಿ ವಾಸವಿದ್ದ ಚಿತ್ರದುರ್ಗ ಮೂಲದ ದರ್ಶನ್ ಎಸ್ (23) ನಾಪತ್ತೆಯಾದವರು.

ದರ್ಶನ್ ಜನವರಿ 12 ರಂದು ರಾತ್ರಿ 8 ಬಳಿಕ ನಾಪತ್ತೆಯಾಗಿದ್ದಾರೆ.5 ಅಡಿ 5 ಇಂಚು ಎತ್ತರ, ಸಾಧಾರಣ ಶರೀರ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ದೂ.ಸಂಖ್ಯೆ: 0820-2520444, ಉಡುಪಿ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444, ಪೊಲೀಸ್ ನಿರೀಕ್ಷಕರು ದೂ.ಸಂಖ್ಯೆ: 9480805408 ಹಾಗೂ ಪೊಲೀಸ್ ಉಪನಿರೀಕ್ಷಕರು ದೂ.ಸಂಖ್ಯೆ: 9480805445 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

- Advertisement -

Latest News

error: Content is protected !!