Wednesday, May 1, 2024
Homeತಾಜಾ ಸುದ್ದಿಕ್ಯಾನ್ಸರ್ ರೋಗಿಗಳಿಗೆ ಸ್ವದೇಶಿ ನಿರ್ಮಿತ ಅಗ್ಗದ ಚಿಕಿತ್ಸೆ; ಮುರ್ಮು

ಕ್ಯಾನ್ಸರ್ ರೋಗಿಗಳಿಗೆ ಸ್ವದೇಶಿ ನಿರ್ಮಿತ ಅಗ್ಗದ ಚಿಕಿತ್ಸೆ; ಮುರ್ಮು

spot_img
- Advertisement -
- Advertisement -

ಮುಂಬೈ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರದಂದು ಮಹಾರಾಷ್ಟ್ರದ ಪೊವೈನಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಯಾನ್ಸರ್‌ ಚಿಕಿತ್ಸೆಗಾಗಿ ಸ್ವದೇಶಿ ನಿರ್ಮಿತ NexCAR 19 ಎಂಬ ಸಿಎಆರ್‌ ಟಿ–ಸೆಲ್ ಥೆರಪಿ ಚಿಕಿತ್ಸೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದು, ‘ಇದು ರೋಗಿಗಳ ಪಾಲಿಗೆ ಭರವಸೆಯ ಬೆಳಕಾಗಿದೆ’ ಎಂದಿದ್ದಾರೆ.

ಸ್ವದೇಶಿ ನಿರ್ಮಿತ ತಂತ್ರಜ್ಞಾನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ‘ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಇದುವೇ ಸ್ಪಷ್ಟ ಉದಾಹರಣೆ’ ಎಂದಿದ್ದಾರೆ. ಐಐಟಿ ಬಾಂಬೆ ಮತ್ತು ಟಾಟಾ ಸ್ಮಾರಕ ಕೇಂದ್ರ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ನೂತನ ಸಾಧನವು ಧಾತು ಆಧಾರಿತ ಚಿಕಿತ್ಸೆಯಾಗಿದೆ. ಇದು ಹಲವು ಬಗೆಯ ಕ್ಯಾನ್ಸರ್ ಕಾರಕ ರೋಗವನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಈ ಚಿಕಿತ್ಸೆಯು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲೇ ಅತ್ಯಂತ ಆಧುನಿಕ ಮತ್ತು ಪರಿಣಾಮಕಾರಿ ಎಂದು ಹೇಳಲಾಗಿದೆ. ಇದನ್ನು ಪಡೆಯಲು ರೋಗಿಗಳಿಗೆ ತಗಲುವ ವೆಚ್ಚವು ಗಣನೀಯವಾಗಿ ಕಡಿಮೆಯಾಗಲಿದೆ’ ಎಂದು ರಾಷ್ಟ್ರಪತಿ ಮುರ್ಮು ಹೇಳಿದ್ದಾರೆ.

‘ಕ್ಯಾನ್ಸರ್ ವಿರುದ್ಧದ ಹೊರಾಟದಲ್ಲಿ ಭಾರತದ ಮೊಟ್ಟ ಮೊದಲ ಜೀನ್ ಚಿಕಿತ್ಸೆಯು ಈ ಕ್ಷೇತ್ರದಲ್ಲಿ ಮಹತ್ವದ ಪ್ರಗತಿಯಾಗಿದೆ. CAR T-cell therapy ಎಂದು ಕರೆಯಲಾಗುವ ಈ ಚಿಕಿತ್ಸೆಯು ಎಲ್ಲರಿಗೂ ಲಭ್ಯ ಮತ್ತು ಕೈಗೆಟಕುವ ದರದಲ್ಲಿ ಸಿಗಲಿದೆ. ಹೀಗಾಗಿ ಕ್ಯಾನ್ಸರ್ ಎದುರಿಸುವ ನಿಟ್ಟಿನಲ್ಲಿ ಭರವಸೆಯ ಬೆಳಕಾಗಿದೆ’ ಎಂದಿದ್ದಾರೆ.

- Advertisement -
spot_img

Latest News

error: Content is protected !!