Saturday, June 6, 2026
Homeಅಪರಾಧಮಂಗಳೂರು : ಅನ್ಯಕೋಮಿನವರೊಂದಿಗೆ ಹೋಲಿ ಡಿಜೆ ಸಂಭ್ರಮ ಆರೋಪ, ಭಜರಂಗದಳ ದಾಳಿ

ಮಂಗಳೂರು : ಅನ್ಯಕೋಮಿನವರೊಂದಿಗೆ ಹೋಲಿ ಡಿಜೆ ಸಂಭ್ರಮ ಆರೋಪ, ಭಜರಂಗದಳ ದಾಳಿ

- Advertisement -
- Advertisement -

ಮಂಗಳೂರು :ನಗರದ ಮರೋಳಿ ಎಂಬಲ್ಲಿ ರಂಗ್ ದೇ ಬರ್ಸಾ ಹೆಸರಿನಲ್ಲಿ ನಡೆಯುತ್ತಿದ್ದ ಹೋಲಿ ಸಂಭ್ರಮದ ಡಿಜೆ ಪಾರ್ಟಿಗೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ನಡೆದಿದೆ.

ಹೋಲಿ ಆಚರಣೆಯಲ್ಲಿ ಡಿಜೆ ಪಾರ್ಟಿ ಜೊತೆಗೆ ಬಣ್ಣ ಎರಚಿಕೊಂಡು ಯುವಕ—ಯುವತಿಯರು ಸಂಭ್ರಮಿಸುತ್ತಿದ್ದರು.

ಇದೇ ವೇಳೆ ಅಶ್ಲೀಲ ವರ್ತನೆ ಹಾಗೂ ಅನ್ಯಕೋಮಿನ ಯುವಕರ ಜೊತೆ ಹೋಲಿ ಆಚರಣೆ ಅಂತ ಆರೋಪಿಸಿ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿದರು.


ಹೋಲಿ ಸಂಭ್ರಮದ ಬ್ಯಾನರ್ ಹರಿದು ಹಾಕಿ ವಸ್ತುಗಳನ್ನ ಪುಡಿಗೈದು ದಾಂಧಲೆ ನಡೆಸಿದ್ದಾರೆ. ಈ ವೇಳೆ ಭಜರಂಗದಳ ಕಾರ್ಯಕರ್ತರು ಮತ್ತು ಆಯೋಜಕರ ಮಧ್ಯೆ ಮಾತಿನ ಚಕಮಕಿ ಆಗಿದ್ದು, ಆಯೋಜಕರು ಮತ್ತು ಕೆಲವರ ಮೇಲೆ ಬಜರಂಗದಳದ ಕಾರ್ಯಕರ್ತರು ಹಲ್ಲೆಗೂ ಯತ್ನಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಬಜರಂಗದಳ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Latest News

error: Content is protected !!