Saturday, June 6, 2026
Homeಕರಾವಳಿಇಸ್ಲಾಂ ಧರ್ಮವಲ್ಲ, ಅದು ಕಾಮುಕರ ಗ್ಯಾಂಗ್!; ವಿಟ್ಲದಲ್ಲಿ ಹಿಂಜಾವೇ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಆಕ್ಷೇಪಾರ್ಹ ಭಾಷಣ

ಇಸ್ಲಾಂ ಧರ್ಮವಲ್ಲ, ಅದು ಕಾಮುಕರ ಗ್ಯಾಂಗ್!; ವಿಟ್ಲದಲ್ಲಿ ಹಿಂಜಾವೇ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಆಕ್ಷೇಪಾರ್ಹ ಭಾಷಣ

- Advertisement -
- Advertisement -

ವಿಟ್ಲ: ಇಸ್ಲಾಂ ಅನ್ನೊದು ಧರ್ಮ ಅಲ್ಲ, ಅದು ಕಾಮುಕರ ಗ್ಯಾಂಗ್ ಎಂದು ಇಸ್ಲಾಂ ಧರ್ಮದ ಬಗ್ಗೆ ಹಿಂದೂ ಜಾಗರಣಾ ವೇದಿಕೆ ಮುಖಂಡರೊಬ್ಬರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ.

ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಿನ್ನೆ ನಡೆದ ಹಿಂದೂ ಜಾಗೃತಿ ಸಭೆಯಲ್ಲಿ ಭಾಷಣ ಮಾಡಿರುವ ಹಿಂದೂ ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಈ ಹೇಳಿಕೆ ನೀಡಿದ್ದಾರೆ.

ಇಸ್ಲಾಂ ಎನ್ನುವಂತಹದ್ದು ಧರ್ಮವಲ್ಲ, ಮತವಲ್ಲ, ಸಂಸ್ಕೃತಿ ಅಲ್ಲ, ಸಭ್ಯತೆ ಅಲ್ಲ, ಸಂಸ್ಕಾರ ಅಲ್ಲ, ಮಾನವೀಯತೆ ಅಲ್ಲ ಎಂದಿರುವ ರಾಧಾಕೃಷ್ಣ ಅಡ್ಯಂತಾಯ, ಇಸ್ಲಾಂ ಅನ್ನೊದು ಕ್ರೌರ್ಯ, ಅಮಾನುಷತೆ, ಅತ್ಯಾಚಾರ, ಲೂಟಿಕೋರರ ತಂಡ, ಅದೊಂದು ಕಾಮುಕರ ಗ್ಯಾಂಗ್‌ ಎಂದು
ಅರ್ಥೈಸಬಹುದು ಅಂತಾ ನನಗೆ ಅನ್ನಿಸುತ್ತಿದೆ ಎಂದು ಹೇಳಿದ್ದಾರೆ.

ವಿಟ್ಲದಲ್ಲಿ ನಿನ್ನೆ ನಡೆದ ಹಿಂದೂ ಜಾಗೃತಿ ಸಭೆಯಲ್ಲಿ ರಾಧಾಕೃಷ್ಣ ಅಡ್ಯಂತಾಯ ಭಾಷಣದ ವೇಳೆ ಈ ವ್ಯಾಖ್ಯಾನ ಮಾಡಿದ್ದಾರೆ.

- Advertisement -

Latest News

error: Content is protected !!