Wednesday, May 1, 2024
Homeಕರಾವಳಿಸುಳ್ಯದ ಮಂಡಕೋಲಿನಲ್ಲಿ 2ನೇ ಬಾರಿಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆ

ಸುಳ್ಯದ ಮಂಡಕೋಲಿನಲ್ಲಿ 2ನೇ ಬಾರಿಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆ

spot_img
- Advertisement -
- Advertisement -

ಸುಳ್ಯದ ಮಂಡಕೋಲಿನಲ್ಲಿ ರಾಜ್ಯದಲ್ಲಿಯೇ ಎರಡನೇ ಬಾರಿ ಕಳೆದ 24 ಗಂಟೆಗಳಲ್ಲಿ ಅತೀ ಹೆಚ್ಚು ಮಳೆಯಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ನೀಡಿದ ಮಳೆ ದಾಖಲೆ ಮಾಹಿತಿಯಂತೆ ಜು.24 ಬೆಳಿಗ್ಗೆ 8.30ರಿಂದ ಜು.25 ಬೆಳಿಗ್ಗೆ 8.30ರ ತನಕ 24 ಗಂಟೆಯಲ್ಲಿ ಮಂಡೆಕೋಲಿನಲ್ಲಿ 217 ಮಿ.ಮಿ.ಮಳೆಯಾಗಿದೆ. ರಾಜ್ಯದ ಅತೀ ಹೆಚ್ಚು ಮಳೆ ಸುರಿದ 60 ಕೇಂದ್ರಗಳ ಪಟ್ಟಿಯನ್ನು ಕೆಎಸ್‌ಎನ್‌ಡಿಎಂಸಿ ಬಿಡುಗಡೆ ಮಾಡಿದ್ದು ಸುಳ್ಯ ತಾಲೂಕಿನ ಅರಂತೋಡಿನಲ್ಲಿ 185 ಮಿ.ಮಿ, ಬೆಳ್ಳಾರೆಯಲ್ಲಿ 183.5 ಮಿ.ಮಿ, ಸಂಪಾಜೆಯಲ್ಲಿ 158 ಮಿ.ಮಿ, ದೇವಚಳ್ಳ 155 ಮಿ.ಮಿ. ನೆಲ್ಲೂರು ಕೆಮ್ರಾಜೆ‌ 148 .5 ಮಳೆಯಾಗಿದೆ.

 ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಮಳೆಯಾಗುವ ಮೂಲಕ ಮಂಡೆಕೋಲು ಗಮನ ಸೆಳೆದಿದೆ. ಕಳೆದ 24 ಗಂಟೆಯಲ್ಲಿ ದಕ್ಷಿಣ ಕನ್ನಡ, ಕೊಡಗು, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ.

- Advertisement -
spot_img

Latest News

error: Content is protected !!