Thursday, June 4, 2026
Homeಕರಾವಳಿಉಡುಪಿಫೆಂಗಲ್ ಚಂಡಮಾರುತದಿಂದ ಉಡುಪಿಯಲ್ಲಿ ಭಾರೀ ಮಳೆ; ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯ

ಫೆಂಗಲ್ ಚಂಡಮಾರುತದಿಂದ ಉಡುಪಿಯಲ್ಲಿ ಭಾರೀ ಮಳೆ; ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯ

- Advertisement -
- Advertisement -

ಉಡುಪಿ: ಜಿಲ್ಲೆಯಾದ್ಯಂತ ಫೆಂಗಲ್ ಚಂಡಮಾರುತದಿಂದ ಅಕಾಲಿಕ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಜಿಲ್ಲೆಯಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಕಳೆದ ರಾತ್ರಿಯು ಗಾಳಿ ಮಳೆಗೆ ಹಲವೆಡೆ ವಿದ್ಯುತ್ ವ್ಯತ್ಯಯ ಆಗಿದೆ. ಇನ್ನು ಮಳೆಯ ಪರಿಣಾಮವಾಗಿ ಮೋಡ ಮುಸುಕಿದ ವಾತಾವರಣ, ಮಳೆ ಮುಂದುವರೆಯುವ ಸಾಧ್ಯತೆಯಿದೆ. ಬ್ರಹ್ಮಾವರದಲ್ಲಿ ಸಿಡಿಲು ಬಡಿದು ಮನೆಗೆ ಹಾನಿಯಾಗಿದೆ. ನೀಲಾವರದ ರಾಧಾ ಶೆಡ್ತಿಯವರ ಮನೆಗೆ ಸಿಡಿಲು ಬಡಿದಿದೆ. ವಿದ್ಯುತ್ ಉಪಕರಣ, ಪರಿಕರಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!