Thursday, June 4, 2026
Homeತಾಜಾ ಸುದ್ದಿಮುಂಬೈ ಮಳೆಗೆ ಕುಸಿದ ಮನೆ: ನೀರಲ್ಲಿ ಕೊಚ್ಚಿ ಹೋದ ಮೂವರು

ಮುಂಬೈ ಮಳೆಗೆ ಕುಸಿದ ಮನೆ: ನೀರಲ್ಲಿ ಕೊಚ್ಚಿ ಹೋದ ಮೂವರು

- Advertisement -
- Advertisement -

ಮುಂಬೈ: ಮಹಾನಗರದಲ್ಲಿ ಮುಂಗಾರು ಆರ್ಭಟ ಮುಂದುವರಿದಿದ್ದು, ಮಂಗಳವಾರ ಮನೆಯೊಂದು ಕುಸಿದ ಪರಿಣಾಮ ಮೂವರು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ ಘಟನೆ ನಡೆದಿದೆ.

ಪೂರ್ವ ಸಂತಕ್ರೂಸ್ ಬಳಿಯ ವೊಕಲಾ ಬಡಾವಣೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮನೆಯ ಹಿಂದೆ ಇದ್ದ ಒಳ ಚರಂಡಿಯೊಳಗೆ ಒಬ್ಬ ಮಹಿಳೆ ಹಾಗೂ ಇಬ್ಬರು ಬಾಲಕಿಯರು ಸೇರಿದಂತೆ ಕನಿಷ್ಠ ಮೂವರು ಬಿದ್ದಿದ್ದಾರೆ. ನಾಪತ್ತೆಯಾದವರ ಶೋಧ ಕಾರ್ಯ ನಡೆದಿದೆ.

ಮುಂಬೈ, ಥಾಣೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, 4.51 ಮೀಟರ್ ಭಾರೀ ಮಳೆಯಾಗಿದೆ. ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

- Advertisement -

Latest News

error: Content is protected !!