Sunday, June 16, 2024
Homeಕರಾವಳಿಉಡುಪಿಕರಾವಳಿಯಾದ್ಯಂತ ಗುಡುಗು ಸಮೇತ ಸುರಿದ ಮಳೆ ; ಸಂಚಾರಕ್ಕೆ ತೊಂದರೆ

ಕರಾವಳಿಯಾದ್ಯಂತ ಗುಡುಗು ಸಮೇತ ಸುರಿದ ಮಳೆ ; ಸಂಚಾರಕ್ಕೆ ತೊಂದರೆ

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಜಿಲ್ಲೆಗಳಲ್ಲಿ (ಅಕ್ಟೋಬರ್ 16) ಸಂಜೆಯ ವೇಳೆಗೆ ಗುಡುಗು- ಮಿಂಚು ಸಹಿತ ಧಾರಾಕಾರ ಮಳೆ ಅಬ್ಬರಿಸಿದೆ.

ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ತಾಲೂಕುಗಳಲ್ಲಿ ಹಗಲು ಹೊತ್ತು ಮೋಡ ಕವಿದ ವಾತಾವರಣವಿತ್ತು. ಉಡುಪಿ ಜಿಲ್ಲೆಯಲ್ಲಿ ಹಗಲಿನಲ್ಲಿ ಬಿಸಿಲಿದ್ದರೂ ಸಂಜೆಯಾಗುತ್ತಿದ್ದಂತೆ ಉಡುಪಿ, ಮಣಿಪಾಲ, ಕಾಪು, ಶಿರ್ವ, ಕಟಪಾಡಿ, ಕಲ್ಯಾಣಪುರ ಸಂತೆಕಟ್ಟೆ ಸೇರಿದಂತೆ ವಿವಿಧೆಡೆ ಭಾರೀ ಮಳೆ ಸುರಿದಿದೆ. ನಗರದ ರಸ್ತೆಗಳಲ್ಲಿಯೂ ಭಾರೀ ಪ್ರಮಾಣದಲ್ಲಿ ನೀರು ಹರಿದಿದೆ. ವಾರಾಂತ್ಯ ಮತ್ತು ಭಾರೀ ಮಳೆಯ ಕಾರಣ ಉಡುಪಿಯ ಕಲ್ಸಂಕ, ಕರಾವಳಿ ಜಂಕ್ಷನ್‌ ಮೊದಲಾದೆಡೆ ವಾಹನಗಳ ದಟ್ಟಣೆ ಹೆಚ್ಚಿಗೆ ಕಂಡುಬಂದು ಟ್ರಾಫಿಕ್‌ ಜಾಮ್‌ ಆಗಿದ್ದು, ಕಾರ್ಕಳ ಮತ್ತು ಕುಂದಾಪುರ ತಾಲೂಕಿನಲ್ಲಿ ಲಘು ಪ್ರಮಾಣದಲ್ಲಿ ಮಳೆಯಾಗಿದೆ. ಪಡೀಲ್‌ ಅಂಡರ್‌ಪಾಸ್‌ನಲ್ಲಿ ನೀರು ತುಂಬಿದ್ದು, ವಾಹನಗಳು ನಿಧಾನವಾಗಿ ಚಲಿಸುತ್ತಿದ್ದವು. ಕೊಡಿಯಾಲಬೈಲ್‌ ಅಕ್ಕಪಕ್ಕದ ಕೆಲವು ಭಾಗಗಳಲ್ಲಿ ಚರಂಡಿ ತುಂಬಿ ರಸ್ತೆಯಲ್ಲಿ ನೀರು ಹರಿದಿದೆ.

ಮಂಗಳೂರಿಗೆ ಶನಿವಾರ ಸಂಜೆ 7 ಗಂಟೆಯಿಂದ ರಾತ್ರಿ 9ರ ನಡುವೆ ಚೆನ್ನೈ, ಹೈದರಾಬಾದ್‌ ಮತ್ತು ಬೆಂಗಳೂರಿನಿಂದ ಆಗಮಿಸಿದ 3 ವಿಮಾನಗಳು ಮಳೆ ಕಾರಣ ಇಳಿಯಲಾಗದೆ ಬೆಂಗಳೂರಿಗೆ ವಾಪಸ್ಸಾಗಿವೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಹಾಗು ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕರಾವಳಿ ಸಹಿತ ರಾಜ್ಯದ ವಿವಿಧೆಡೆ ರವಿವಾರವೂ ಗುಡುಗು ಸಹಿತ ಮಳೆ ಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

- Advertisement -
spot_img

Latest News

error: Content is protected !!