Wednesday, June 3, 2026
Homeತಾಜಾ ಸುದ್ದಿಮಳೆಗೆ ಮನೆಯ ಗೋಡೆ ಕುಸಿದು ಐವರು ಸಾವು

ಮಳೆಗೆ ಮನೆಯ ಗೋಡೆ ಕುಸಿದು ಐವರು ಸಾವು

- Advertisement -
- Advertisement -

ಹೈದರಾಬಾದ್: ಹೈದರಾಬಾದ್ ನಲ್ಲಿ ವರುಣನ ಆರ್ಭಟ ಜೋರಾಗಿದೆ. ಈಗಾಗಲೇ ಅನೇಕ ಅನಾಹುತಕ್ಕೆ ಕಾರಣಾಗಿರುವ ಇಲ್ಲಿ ಮತ್ತೆ ಐವರನ್ನು ಬಲಿ ಪಡೆದಿದ್ದಾನೆ.

ಹೌದು…ನಿನ್ನೆ ಸುರಿದ ಭಾರಿ ಮಳೆಯಿಂದ ಮನೆ ಗೋಡೆ ಕುಸಿದು ಐವರು ಮೃತ ಪಟ್ಟಿರುವ ಘಟನೆ ತೆಲಂಗಾಣದ ವನಪರ್ತಿ ಜಿಲ್ಲೆಯ ಬದ್ದಾರಂನಲ್ಲಿ ನಡೆದಿದೆ.

ಮಳೆಗೆ ಮನೆ ಗೋಡೆ ಕುಸಿದು ಒಂದೇ ಕುಟುಂಬದ ಐವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಅತ್ತೆ, ಇಬ್ಬರು ಸೊಸೆಯರು, ಹಾಗೂ ಇಬ್ಬರು ಮೊಮ್ಮಕ್ಕಳು ರಾತ್ರಿ ಮಲಗಿದ್ದಾಗ ಈ ಘಟನೆ ಸಂಭವಿಸಿದೆ. ಮೃತರನ್ನು ಮನೆಮ್ಮ(68), ಸುಪ್ರಜಾ(32), ಕುಮಾರಿ ( 21),ರಿಂಕಿ(18), ಉಮಾದೇವಿ(38) ಎಂದು ಗುರುತಿಸಲಾಗಿದೆ. ಶಿಥಿಲಗೊಂಡಿದ್ದ ಮನೆ ಇತ್ತೀಚಿನ ಮಳೆಯಿಂದಾಗಿ ಕುಸಿದಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!