Thursday, May 9, 2024
Homeತಾಜಾ ಸುದ್ದಿಮುಂಬೈ: ಭಾರೀ ಬೆಂಕಿ ಅವಘಡ - ಬೆಂಕಿ ನಂದಿಸಲು ಹರಸಾಹಸ ಪಟ್ಟ ಅಗ್ನಿಶಾಮಕದಳ!..

ಮುಂಬೈ: ಭಾರೀ ಬೆಂಕಿ ಅವಘಡ – ಬೆಂಕಿ ನಂದಿಸಲು ಹರಸಾಹಸ ಪಟ್ಟ ಅಗ್ನಿಶಾಮಕದಳ!..

spot_img
- Advertisement -
- Advertisement -

ಮುಂಬೈ: ಇಲ್ಲಿನ ನಾಗ್ಪಾದ ಪ್ರದೇಶದಲ್ಲಿರುವ ಮಾಲ್​ವೊಂದರಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಅವಘಡದಲ್ಲಿ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ.ಐದು ಹಂತದಲ್ಲಿ ಬೆಂಕಿ ಆರಿಸಲಾಗಿದೆ.

ಮಾಲ್​ನಲ್ಲಿ ಬೆಂಕಿ ಕಾಣಿಸಿಕೊಂಡ 12 ಗಂಟೆಗಳ ಬಳಿಕ ಮುಂಬೈ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.ಮಾಲ್​ನಲ್ಲಿ ನಲ್ಲಿದ್ದ ಸುಮಾರು 300 ಜನರನ್ನು ರಕ್ಷಿಸಲಾಗಿದೆ.ಮಾಲ್​ನ ಪಕ್ಕದ ಕಟ್ಟಡದಲ್ಲಿದ್ದ ಸುಮಾರು 3,500 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.ಬೆಂಕಿ ಅವಘಡ ಸಂಭವಿಸಲು ಕಾರಣ ಏನೆಂಬುದು ಇನ್ನೂ ಸಹ ತಿಳಿದು ಬಂದಿಲ್ಲ. ಈ ಸಂಬಂಧ ಪೊಲೀಸರು ಮತ್ತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!