Saturday, May 18, 2024
Homeಕರಾವಳಿಮಂಗಳೂರು: ತಂಬಾಕು ಜಗಿದು ಉಗುಳಿದ ನೀರಿನಲ್ಲೇ ಮಡ್ಕಾ ಪಾಟ್ ತೊಳೆಯೋ ವೀಡಿಯೋ ವೈರಲ್; ಮಟ್ಕಾ ಸೋಡಾ...

ಮಂಗಳೂರು: ತಂಬಾಕು ಜಗಿದು ಉಗುಳಿದ ನೀರಿನಲ್ಲೇ ಮಡ್ಕಾ ಪಾಟ್ ತೊಳೆಯೋ ವೀಡಿಯೋ ವೈರಲ್; ಮಟ್ಕಾ ಸೋಡಾ ಸ್ಟಾಲ್ ಮೇಲೆ ಆರೋಗ್ಯಾಧಿಕಾರಿಗಳಿಂದ ದಾಳಿ

spot_img
- Advertisement -
- Advertisement -

ಮಂಗಳೂರು: ಶುಚಿತ್ವ ಇಲ್ಲದೇ  ಕುದ್ರೋಳಿ ಜಾತ್ರೆಯಲ್ಲಿ ಮಟ್ಕಾ ಸೋಡಾ ಮಾರಾಟ ಹಿನ್ನೆಲೆ‌‌, ಮಟ್ಕಾ ಸೋಡಾ ಸ್ಟಾಲ್ ಗೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.ಮಂಗಳೂರಿನ ಗೋಕರ್ಣನಾಥೇಶ್ವರ ದೇವಸ್ಥಾನ ಬಳಿಯ ಮಟ್ಕಾ ಸೋಡಾ ಸ್ಟಾಲ್ ಮೇಲೆ ದಾಳಿ ಮಾಡಿದ್ದಾರೆ.

ಮಂಗಳೂರು ದಸರಾ ಹಿನ್ನೆಲೆಯಲ್ಲಿ ಸ್ಟಾಲ್ ನಲ್ಲಿ‌ ಮಟ್ಕಾ ಸೋಡಾ ಮಾರಾಟ ಮಾಡಲಾಗುತ್ತಿತ್ತು. ಆದರೆ ಯಾವುದೇ ಸ್ವಚ್ಛತೆ ಕಾಪಾಡದೇ ಮಟ್ಕಾ ಸೋಡಾ ವ್ಯಾಪಾರ ಮಾಡುತ್ತಿದ್ದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಮಟ್ಕಾ ಸೋಡಾ ತಯಾರಿ ವಿಡಿಯೋ ವೈರಲ್ ಆಗಿತ್ತು. ಕೊಳಚೆ ನೀರಿನಲ್ಲಿ ಮಟ್ಕಾ ಪಾಟ್ ಗಳನ್ನು ತೊಳೆಯುವ ವಿಡಿಯೋ ವೈರಲ್ ಆಗಿತ್ತು. ಸ್ಟಾಲ್ ಸಿಬ್ಬಂದಿ ತಂಬಾಕು ಜಗಿದು ಉಗುಳಿದ ಬಳಿಕ ಅದೇ ನೀರಿನಲ್ಲಿ ಪಾಟ್ ತೊಳೆಯೋ ವೀಡಿಯೋ ವೈರಲ್ ಆದ ಬೆನ್ನಲ್ಲೇ ಇಂದು ಪಾಲಿಕೆ ಆರೋಗ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ಮಾಡಿ ಮಟ್ಕಾ ಸೋಡಾ ಶಾಪ್ ಸೀಝ್ ಮಾಡಿದ್ದಾರೆ.

ಮಟ್ಕಾ ಸೋಡಾ ಪಾಟ್ ಸಹಿತ ವಸ್ತುಗಳನ್ನು ವಶಕ್ಕೆ ಪಡೆದು, ಕುದ್ರೋಳಿ ಜಾತ್ರೆಯ ಉಳಿದ ಸ್ಟಾಲ್ ಗಳಲ್ಲೂ ಶುಚಿತ್ವದ ಪರಿಶೀಲನೆ ನಡೆಸಿ, ಶುಚಿತ್ವ ಕಾಪಾಡದೇ ಇದ್ದಲ್ಲಿ ಸ್ಟಾಲ್ ಸೀಝ್ ಮಾಡುವ ಎಚ್ಚರಿಕೆ ಕೊಟ್ಟಿದ್ದಾರೆ.

- Advertisement -
spot_img

Latest News

error: Content is protected !!